ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವುದನ್ನು ಬಿಟ್ಟು ಕೆಲಸ ಮಾಡಿದ್ದರೆ ಶಿಶುಗಳ ಮಾರಣಹೋಮ ತಪ್ಪುತ್ತಿತ್ತು : ಯತ್ನಳ್ ಟ್ವೀಟ್

ಮೈಸೂರು :ಇತ್ತೀಚಿಗೆ ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದ ಮೈಸೂರು ಹಾಗೂ ಮಂಡ್ಯದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು,ಸೊಪ್ಪು, ಹಣ್ಣು ಮಾರುವವರನ್ನು ಎತ್ತಂಗಡಿ ಮಾಡುವುದನ್ನು ಬಿಟ್ಟು, ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೂರಿಸುವುದನ್ನು ಬಿಟ್ಟು, ಕೊಟ್ಟಿರುವ ಗಸ್ತು ವಾಹನದಲ್ಲಿ ವಸೂಲಿ, ಹಫ್ತಾ ತೆಗೆಯುವುದು ಬಿಟ್ಟು, ಕಟ್ಟು ನಿಟ್ಟಾಗಿ ಕೆಲಸ ಮಾಡಿದ್ದರೆ ಕಂದಮ್ಮಗಳ ಮಾರಣಹೋಮ ತಪ್ಪುತಿತ್ತು ಎಂದು ಅವರು ವ್ಯಂಗ್ಯವಾಡಿದ್ದಾರೆ

ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯದ ಒಬ್ಬ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಅಸಹಾಯಕ ಮಾತುಗಳನ್ನು ನಿರೀಕ್ಷಿಸರಲಿಲ್ಲ. ಗೃಹ, ಪೊಲೀಸ್ ಹಾಗೂ ಬೇಹುಗಾರಿಕೆ ಇಲಾಖೆಯ ಸಾಮೂಹಿಕ ವೈಫಲ್ಯವೇ ಭ್ರೂಣ ಹತ್ಯೆಗೆ ಕಾರಣವಾಗಿದೆ. ಈ ಇಲಾಖೆಗಳು ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಭ್ರೂಣ ಹತ್ಯೆ ತಡೆಯಬಹುದಿತ್ತು ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!