ಶೇ 93ರಷ್ಟು 2000ರೂ. ನೋಟುಗಳು ಮತ್ತೆ ಬ್ಯಾಂಕ್ಗೆ- ಆರ್.ಬಿ.ಐ
ಮುಂಬೈ ಸೆ.1 : ರೂ. 2000 ಮುಖಬೆಲೆಯ ಶೇ 93ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಕಳೆದ ಮೇ 19ರಂದು ಹಿಂಪಡೆದಿದ್ದ 2000 ಮುಖಬೆಲೆಯ ನೋಟುಗಳಲ್ಲಿ ಆ. 31ರವರೆಗೆ ಶೇ 93ರಷ್ಟು ಬ್ಯಾಂಕುಗಳಿಗೆ ಮರಳಿವೆ. ಈವರೆಗೂ ಬ್ಯಾಂಕುಗಳಿಗೆ ಮರಳಿರುವ ನೋಟುಗಳಲ್ಲಿ ಶೇ 87ರಷ್ಟು ಠೇವಣಿ ರೂಪದಲ್ಲಿ ಸಲ್ಲಿಕೆಯಾಗಿವೆ. ಶೇ 13ರಷ್ಟು ವಿವಿಧ ಮುಖಬೆಲೆಯ ನೋಟುಗಳಿಗೆ ವಿನಿಮಯಗೊಂಡಿವೆ. ಎಂದು ತಿಳಿದು ಬಂದಿದೆ
ಹಾಗೂ ವಿವಿಧ ಬ್ಯಾಂಕುಗಳ ಮಾಹಿತಿ ಅನ್ವಯ 2 ಸಾವಿರ ಮುಖಬೆಲೆಯ 3.32 ಲಕ್ಷ ಕೋಟಿ ಮೊತ್ತದ ನೋಟುಗಳ ಬ್ಯಾಂಕುಗಳಿಗೆ ಸಲ್ಲಿಕೆಯಾಗಿವೆ. ಆ. 31ರಂದು 24 ಸಾವಿರ ಕೋಟಿ ಮೌಲ್ಯದ ನೋಟುಗಳು ಬ್ಯಾಂಕ್ಗಳಿಗೆ ಸಲ್ಲಿಕೆಯಾಗಿವೆ ಎಂದು ಆರ್.ಬಿ.ಐ ತಿಳಿಸಿದೆ.
2023ರ ಮಾರ್ಚ್ 31ರವರೆಗೂ 3.62 ಲಕ್ಷ ಕೋಟಿಯಷ್ಟು 2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಮೇ 19ರ ಹೊತ್ತಿಗೆ ಇದು 3.56 ಲಕ್ಷ ಕೋಟಿಗೆ ಕುಸಿಯಿತು. ಇದೀಗ 2 ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸಿ ಅದೇ ಮೌಲ್ಯದ ಇತರ ಮುಖಬೆಲೆಯ ನೋಟುಗಳನ್ನು ಪಡೆಯಲು ಸೆ. 30ರವರೆಗೂ ಅವಕಾಶವಿದೆ ಎಂದು ಆರ್ಬಿಐ ಹೇಳಿದೆ.