ಬಾಯ್ ಫ್ರೆಂಡ್ ಬೇಕಾಗಿದ್ದಾರೆ- ಟಿಕ್ ಟಾಕ್‌ನಲ್ಲಿ ಹೀಗೊಂದು ಜಾಹಿರಾತು

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮದಲ್ಲಿ ಯಾವ ರೀತಿಯ ಜಾಹಿರಾತು ಗಳನ್ನು ನೋಡುತ್ತೇವೆ. ಉದ್ಯೋಗ, ಮದುವೆಗೆ ವಧು ,ವರರು ಬೇಕಾಗಿದ್ದಾರೆ ಅನ್ನೋ ಜಾಹೀರಾತನ್ನೂ ನೋಡಿದ್ದೇವೆ. ಆದರೆ ಬಾಯ್ ಫ್ರೆಂಡ್ ಬೇಕು ಎಂಬ ಜಾಹಿರಾತನ್ನು ಎಲ್ಲಾದರೂ ನೋಡಿದ್ದೀರಾ. ಇಲ್ಲೊಬ್ಬಳು ಯುವತಿ ಬಾಯ್ ಫ್ರೆಂಡ್ ಗಾಗಿ ಒಂದು ಅಪ್ಲಿಕೇಷನ್ ಸಿದ್ಧಪಡಿಸಿದ್ದಾಳೆ.

ಹೌದು ಟಿಕ್ ಟಾಕ್ ನಲ್ಲಿ @itsveradijkmans ಹೆಸರಿನ ಐಡಿಯಿಂದ ವೆರಾ ಎಂಬ ಹೆಸರಿನ ಯುವತಿ ಈ ಅಪ್ಲಿಕೇಷನ್ ಹಾಕಿದ್ದಾಳೆ. ಲಂಡನ್ ನಿವಾಸಿ ವೆರಾ, ಪ್ರೀತಿಯನ್ನು ಹುಡುಕಲು ನಾನು ಹಾಕಿರುವ ಅಪ್ಲಿಕೇಷನ್ ಅನೇಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ ಎಂದು ವೆರಾ ಹೇಳಿದ್ದಾಳೆ. ಅಲ್ಲದೆ, ಅಪ್ಪ ಅಮ್ಮನ ಜೊತೆ ಈಗ್ಲೂ ನೆಲೆಸಿದ್ದೀರಾ, ನಿಮ್ಮ ಬಳಿ ಕಾರ್ ಇದೆಯೇ ಎಂದೆಲ್ಲ ವೆರಾ ಕೇಳಿದ್ದು, ಅದ್ರ ಬಗ್ಗೆಯೂ ಟಿಕ್ ಟಾಕ್ ನಲ್ಲಿ ಚರ್ಚೆ ನಡೆಸಿದ್ದಾಳೆ.

ಈ ಬಗ್ಗೆ ಆಕೆ 2023ರ ಸಮಯದಲ್ಲಿ ಬಾಯ್ ಫ್ರೆಂಡ್, ಪ್ರೀತಿ ಹುಡುಕೋದು ಸುಲಭವಲ್ಲ. ಈಗಿನ ಸಮಯದಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಶೀರ್ಘವಾಗಿ ಹಾಗೂ ನನಗೆ ಸೂಕ್ತವಾದ ವ್ಯಕ್ತಿ ಸಿಗಲಿ ಎನ್ನುವ ಕಾರಣಕ್ಕೆ ನಾನು ಈ ಜಾಹೀರಾತು ನೀಡಿದ್ದೆ. ಅಪ್ಲಿಕೇಷನ್ ಹಾಕಿದ ನಂತ್ರ ವೆರಾ ಡಿಎಂ ಫುಲ್ ಆಗಿದೆ. ಎಷ್ಟು ಅಪ್ಲಿಕೇಷನ್ ಬಂದಿದೆ ಎನ್ನುವುದನ್ನು ಲೆಕ್ಕ ಹಾಕೋಕೆ ಸಾಧ್ಯವಾಗ್ತಿಲ್ಲ ಅಂದಾಜು 24 ಗಂಟೆಯಲ್ಲಿ ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಅಪ್ಲಿಕೇಷನ್ ಬಂದಿದೆ ಇನ್ನೂ ಹೆಚ್ಚು ಅಪ್ಲಿಕೇಷನ್ ಬರುತ್ತೆ ಎನ್ನುವ ನಿರೀಕ್ಷೆಯಿದೆ ಎನ್ನುತ್ತಾಳೆ ವೆರಾ.

ಮಾನದಂಡದಲ್ಲಿ ಯಾವುದೇ ಬದಲಾವಣೆ ಇಲ್ಲವೆನ್ನುವ ವೆರಾ, ನಾನು ಜೀವನದ ಇಷ್ಟು ದಿನ ಸಿಂಗಲ್ ಆಗಿದ್ದೆ. ಈಗ ಬಾಯ್ ಫ್ರೆಂಡ್ ಪಡೆಯಲು, ಕುಟುಂಬ ನಿರ್ವಹಿಸಲು ಸಿದ್ಧವಾಗಿದ್ದೇನೆ. ಈ ಬಗ್ಗೆ ನಾನು ಗಂಭೀರವಾಗಿದ್ದೇನೆ. ಪ್ರೀತಿ ಅಷ್ಟು ಬೇಗ ಸಿಗೋದು ಕಷ್ಟ ಎಂಬುದು ನನಗೂ ಗೊತ್ತು ಎನ್ನುತ್ತಾಳೆ.

ವೆರಾ ಹಾಕಿರುವ ಅಪ್ಲಿಕೇಷನ್ ಪೋಸ್ಟ್‌ನಲ್ಲಿ ಅನೇಕ ಸಂಗತಿಗಳು ಇದೆ. ಹುಡುಗನು ಬುದ್ಧಿವಂತನಾಗಿರಬೇಕು, ಅವನು ಸಂಗೀತದಲ್ಲಿ ಉತ್ತಮ ಅಭಿರುಚಿಯನ್ನು ಹೊಂದಿರಬೇಕು ಮತ್ತು ಅವನ ಸ್ವಂತ ಆದಾಯವನ್ನು ಹೊಂದಿರಬೇಕು. ಅವನು ನಿಷ್ಠಾವಂತರಾಗಿರಬೇಕು ಮತ್ತು ಕಾರ್ಟೂನ್ ನೋಡುವ ವ್ಯಕ್ತಿಯಾಗಬೇಕು. ಮೊದಲ ಡೇಟ್ ನಲ್ಲಿ ಬಿಲ್ ಯಾರು ನೀಡ್ತಾರೆ ಎಂಬುದನ್ನೂ ಅಪ್ಲಿಕೇಷನ್ ನಲ್ಲಿ ನಮೂದಿಸಿದ್ದಾಳೆ. ಜೊತೆಗೆ ಅಗತ್ಯ ಬಿದ್ರೆ ನಾನೇ ಬಿಲ್ ಪಾವತಿ ಮಾಡ್ತೇನೆ ಎಂದೂ ಆಕೆ ಹೇಳಿದ್ದಾಳೆ. ಅಲ್ಲದೆ ಅಪ್ಲಿಕೇಷನ್ ನಲ್ಲಿ ಹೆಸರು, ಬ್ಲಡ್ ಗ್ರೂಪ್, ಮಕ್ಕಳಿದ್ದಾರಾ ಎಂಬುದರಿಂದ ಹಿಡಿದು ಅನೇಕ ಸಂಗತಿಗಳನ್ನು ನೋಡಬಹುದು.

ಇನ್ನು ಆಕೆಗೆ ಟಿಕ್ ಟಾಕ್ ನಲ್ಲಿ 374,000 ಗಿಂತಲೂ ಹೆಚ್ಚು ಫಾಲೋವರ್ಸ್ (Followers) ಇದ್ದಾರೆ. ಇದೀಗ ವೆರಾ ಹಾಕಿರುವ ಅಪ್ಲಿಕೇಷನ್‌ಗೆ ಅನೇಕರು ಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!