ಬೆಳ್ಮಣ್: ಚರಂಡಿ ಕಾಮಗಾರಿ ಹೊಂಡಕ್ಕೆ ಬಿದ್ದು ಬೈಕ್ ಸವಾರ ಗಂಭೀರ ಗಾಯ
ಬೆಳ್ಮಣ್ : ಚರಂಡಿ ನಿರ್ಮಾಣ ಕಾಮಗಾರಿ ಸಲುವಾಗಿ ರಸ್ತೆ ನಡುವೆ ತೋಡಲಾಗಿದ್ದ ಹೊಂಡಕ್ಕೆ ಬಿದ್ದು ಬೈಕ್ ಸವಾರನೋರ್ವ ಗಂಭೀರ ಗಾಯಗೊಂಡ ಘಟನೆ ಸಚ್ಚೇರಿಪೇಟೆಯಲ್ಲಿ ನಡೆದಿದೆ. ಬೋಳ ನಿವಾಸಿ ದಿನೇಶ್ ಪೂಜಾರಿ ಗಂಭೀರ ಗಾಯಗೊಂಡವರಾಗಿದ್ದು, ಇವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚರಂಡಿ ಕಾಮಗಾರಿ ಕುರಿತು ಸೂಚನಾ ಫಲಕ ಅಳವಡಿಸದ ಕಾರಣ ಹೊಂಡ ತಿಳಿಯದೆ ಸವಾರ ಬೈಕ್ ಚಲಾಯಿಸಿಕೊಂಡು ಬಂದ ಕಾರಣ ಘಟನೆ ನಡೆದಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಒಂದು ವಾರದ ಹಿಂದೆ ಇದೇ ಚರಂಡಿ ಹೊಂಡಕ್ಕೆ ಬಿದ್ದು ಬೈಕ್ ಸವಾರ ಸಣ್ಣ ಪುಟ್ಟ ಗಾಯಗೊಂಡಿದ್ದರು. ಹಾಗೂ ಜಾರಿಗೆಕಟ್ಟೆ ಸಮೀಪದ ಅಲಂಗಾರು ಗುಡ್ಡೆ ಎಂಬಲ್ಲಿಯೂ ಚರಂಡಿಯ ಹೊಂಡಕ್ಕೆ ಕಾರೊಂದು ಬಿದ್ದು ನಜ್ಜು ಗುಜ್ಜಾದ ಘಟನೆಯೂ ನಡೆದಿತ್ತು. ಇದೀಗ ಪದೇ ಪದೇ ಚರಂಡಿ ಕಾಮಗಾರಿಗೆ ತೋಡಲಾದ ಹೊಂಡಕ್ಕೆ ಬೈಕ್ ಕಾರುಗಳು ಬಿದ್ದು ಸವಾರರು ಗಾಯಗೊಳ್ಳುತ್ತಿದರೂ ಈ ಬಗ್ಗೆ ಗುತ್ತಿಗೆದಾರ ಮಾತ್ರ ಏನು ಆಗದಂತೆ ಅವೈಜ್ಞಾನಿಕ ಕಾಮಗಾರಿಯನ್ನು ಮತ್ತೆ ನಡೆಸುತ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ