ನವದೆಹಲಿ: ಮಾದಕ ವಸ್ತುಗಳ ಜಾಲವನ್ನು ಬೇಧಿಸಿದ ಪೊಲೀಸರು

ನವದೆಹಲಿ : ಮಾದಕ ವಸ್ತುಗಳ ಜಾಲಕ್ಕೆ ಸಂಬಂಧಿಸಿ “ಕಾಸರ್‍ಗೋಡ್ ನೆಟ್‍ವರ್ಕ್” ಜಾಲವನ್ನು ಎನ್‍ಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಜಾಲದ ಮೂಲಕ ಭಾರತದಿಂದ ಮಧ್ಯಪ್ರಾಚ್ಯ ದೇಶಗಳಿಗೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಕತಾರ್‍ನ ವಿಮಾನ ನಿಲ್ದಾಣಗಳಲ್ಲಿನ ಅಧಿಕಾರಿಗಳು ಪ್ರತಿ ತಿಂಗಳು 10-15 ಭಾರತೀಯರನ್ನು ಮಾದಕ ದ್ರವ್ಯಗಳ ಸಮೇತ ಬಂಧಿಸಲಾಗುತ್ತಿದ್ದು, ಇವರಲ್ಲಿ ಬಹುತೇಕರು ಕಾಸರಗೋಡು ನೆಟ್‍ವರ್ಕ್ ಜಾಲಕ್ಕೆ ಸೇರಿದವರಾಗಿದ್ದು, ಕತಾರ್, ಸೌದಿ ಅರೇಬಿಯಾ, ಕೇರಳ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಲ್ಲದೆ ಇವರು ಒಬ್ಬರಿಗೊಬ್ಬರು ವಾಯ್ಸ ಇಂಟರ್‍ನೆಟ್ ಪ್ರೊಟೊಕಾಲ್ (ವಿಒಐಪಿ) ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ವರದಿಯಾಗಿದೆ
ದೇಶದಲ್ಲಿ ಈ ನೆಟ್ ವರ್ಕ್‍ಗಾಗಿ ಸುಮಾರು 100 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಗ್ಯಾಂಗ್ ನ ಸದಸ್ಯರು ವಯನಾಡ್ (ಕೇರಳ), ಮಡಿಕೇರಿ, ಮಂಗಳೂರು ಮತ್ತು ಕೊಡಗು (ಕರ್ನಾಟಕ), ಹೈದರಾಬಾದ್, ಬೆಂಗಳೂರು, ಮುಂಬೈ, ಗೋವಾ ಮತ್ತು ದೆಹಲಿಯಲ್ಲಿ ಪ್ರಸ್ತುತ ನೆಲೆಯೂರಿದ್ದಾರೆ ಎಂದು ತಿಳಿದು ಬಂದಿದ್ದು ಅವರೆಲ್ಲರ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
2019ರಲ್ಲಿ ಮೊಹಮ್ಮದ್ ಶಫೀಕ್ ಮತ್ತು ಆತನ ಗರ್ಭಿಣಿ ಪತ್ನಿ ಒನಿಬಾ ಕೌಸರ್ ಶಕೀಲ್ ಅಹ್ಮದ್ ಎಂಬ ದಂಪತಿಯನ್ನು ಹನಿಮೂನ್ ಗಿಫ್ಟ್ ಪ್ಯಾಕೇಜ್‍ನಡಿ ತಬಸ್ಸಮ್ ಮತ್ತು ಆಕೆಯ ಸ್ನೇಹಿತ ನಿಜಾಮ್ ಕಾರಾ ಎಂಬವರು ಕತಾರ್ ಪ್ರವಾಸಕ್ಕೆ ಕಳುಹಿಸಿದ್ದರು. ಪ್ಯಾಕೇಜ್ ಅಡಿಯಲ್ಲಿ ದಂಪತಿಗೆ ನೀಡಲಾಗಿದ್ದ ಗಿಫ್ಟ್ನಲ್ಲಿ ಮಾದಕದ್ರವ್ಯಗಳನ್ನು ಅಡಗಿಸಿಡಲಾಗಿತ್ತು. ಹಾಗಾಗಿ ದೋಹಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದು ಅವರಿಗೆ ಜೈಲು ಶಿಕ್ಷ ಆಗಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿತೆಂದು ಎನ್‍ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!