ಮಂಗಳೂರು : ನಾಪತ್ತೆಯಾಗಿದ್ದ ಕಾವಲುಗಾರ ಶವವಾಗಿ ಪತ್ತೆ

ಮಂಗಳೂರು(ಉಡುಪಿ ಟೈಮ್ಸ್ ವರದಿ) : ಸುರತ್ಕಲ್‍ನ ಗುಡ್ಡೆಕೊಪ್ಲ ಬಳಿ ಸಮುದ್ರದಲ್ಲಿ ನಿಲ್ಲಿಸಲಾಗಿದ್ದ ಭಗವತಿ ಪ್ರೇಮ್ ಡ್ರೆಜ್ಜರ್ ನಿಂದ ನಾಪತ್ತೆಯಾಗಿದ್ದ ಕಾವಲುಗಾರ ಗದಗ ಮೂಲದ ಶಂಕರ (40) ಮೃತ ದೇಹ ಇಂದು (ಏ.5) ಸಮುದ್ರದ ಕಿನಾರೆಯಲ್ಲಿ ಪತ್ತೆಯಾಗಿದೆ.

ಶಂಕರ್ ಅವರು ಕಳೆದ ಮೂರು ದಿನಗಳ ಹಿಂದೆಯಷ್ಟೇ ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇವರು ನಿನ್ನೆ ಸಂಜೆ 6 ರಿಂದ ಇಂದು ಬೆಳಗ್ಗೆ 8-30ರ ವರೆಗೆ ಕರ್ತವ್ಯದ ಪಾಳಿಯಾಗಿದ್ದು, ಇವರನ್ನು ಬೋಟ್ ಮೂಲಕ ಡ್ರೆಜ್ಜರಿಗೆ ಬಿಡಲಾಗಿತ್ತು. ಆದರೆ ರಾತ್ರಿ 11-30ರ ವೇಳೆಗೆ ಸಹ ಕಾವಲುಗಾರ ನೋಡಿದಾಗ ಶಂಕರ್ ಅವರು ಡ್ರೆಜ್ಜರ್‍ನಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಅಗತ್ಯ ಮಾಹಿತಿ ನೀಡಲು ಸಹಕಾರ್ಮಿಕನ ಮೊಬೈಲ್ ನಲ್ಲಿ ಚಾರ್ಜ್ ಕೂಡಾ ಇರಲಿಲ್ಲ ಎಂದು ತಿಳಿದು ಬಂದಿದ್ದು. ಆನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದೀಗ ಪ್ರಕರಣಕಕ್ಕೆ ಸಂಬಂಧಿಸಿ ಡ್ರೆಜ್ಜರ್ ಮಾಲಿಕನ ಮೇಲೆ ಸುರತ್ಕಲ್ ಪೊಲೀಸರು ನಿರ್ಲಕ್ಷ್ಯ ಕಾರಣದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!