ಶಿರ್ವ: ಬಾವಿಗೆ ಬಿದ್ದು ಎರಡುವರೇ ವರ್ಷದ ಮಗು ಮೃತ್ಯು, ಬಟ್ಟೆ ಖರೀದಿಸಲು ಬಂದಾಗ ನಡೆದ ದುರ್ಘಟನೆ

ಶಿರ್ವ: (ಉಡುಪಿ ಟೈಮ್ಸ್ ವರದಿ)ಪೋಷಕರ ಜೊತೆ ಬಟ್ಟೆ ಅಂಗಡಿಗೆ ಬಂದ ಪುಟ್ಟ ಮಗುವೊಂದು ಆಟವಾಡುತ್ತ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ಮುದರಂಗಡಿಯ ಪೇಟೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತ ಬಾಲಕಿ ಅದಮಾರು, ವಾಜಪೇಯಿ ನಗರದ ಜಯಲಕ್ಷ್ಮೀ ಮತ್ತು ಕೃಷ್ಣ ದಂಪತತಿಗಳ ಎರಡುವರೇ ವರ್ಷದ ಪ್ರಿಯಾಂಕ ಎಂದು ತಿಳಿದು ಬಂದಿದೆ.

ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಬಟ್ಟೆಯಂಗಡಿಗೆ ಪೋಷಕರೊಂದಿಗೆ ಬಂದ ಮಗು 4.30 ರ ಸುಮಾರಿಗೆ ಅಂಗಡಿಯ ಹೊರಗೆ ಆಟವಾಡುತ್ತ ಅಲ್ಲಿ ಪಕ್ಕದಲ್ಲಿ ಅಪೂರ್ಣ ಆವರಣ ಗೋಡೆ ಇದ್ದ ಬಾವಿಗೆ ಬಿದ್ದಿತ್ತು.

ತಾಯಿ ಬಟ್ಟೆ ಖರಿದೀಸಿ ಹೊರಗೆ ಬರುವಾಗ ಮಗು ಕಾಣದಿದ್ದಾಗ ಗಾಬರಿಗೊಂಡು ಅಂಗಡಿ ಮಾಲಕರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಹುಡುಕಾಟ ನಡೆಸಿದಾಗ ಅಲ್ಲೇ ಪಕ್ಕದ ಬಾವಿಯಲ್ಲಿ ಮಗುವಿನ ಬ್ಯಾಗ್ ಮತ್ತು ಹೂ ಕಾಣಿಸಿದೆ.

ತಕ್ಷಣ ಸ್ಥಳೀಯರು ಹಾಗೂ ಶಿರ್ವ ಪೊಲೀಸರು ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಮಗು ಆದಾಗಲೇ ನೀರಿನಲ್ಲಿ ಮುಳುಗಿ ಮೃತ ಪಟ್ಟಿದೆಂದು ತಿಳಿದು ಬಂದಿದೆ.

1 thought on “ಶಿರ್ವ: ಬಾವಿಗೆ ಬಿದ್ದು ಎರಡುವರೇ ವರ್ಷದ ಮಗು ಮೃತ್ಯು, ಬಟ್ಟೆ ಖರೀದಿಸಲು ಬಂದಾಗ ನಡೆದ ದುರ್ಘಟನೆ

Leave a Reply

Your email address will not be published. Required fields are marked *

error: Content is protected !!