ಬಂಟಕಲ್ಲು –ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ

ಉಡುಪಿ ಜೂ.11(ಉಡುಪಿ ಟೈಮ್ಸ್ ವರದಿ): ಜಯಸ್ಮೃತಿ ಆರೋಗ್ಯ ಟ್ರಸ್ಟ್‌ ಶ್ರೀ ಕೃಷ್ಣ ಛಾಯಾ ಬಂಟಕಲ್ಲು ಇವರ ನೇತೃತ್ವದಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿಯಂತ್ರಣಾ ವಿಭಾಗ -ಸಂಚಾರಿ ನೇತ್ರ ಘಟಕ, ಜಿಲ್ಲಾಸ್ಪತ್ರೆ, ಉಡುಪಿ, ಶಿರ್ವ ಮಹಿಳಾ ಮಂಡಲ ಶಿರ್ವ,ಲಯನ್ಸ್ ಕ್ಲಬ್ ಉಡುಪಿ ಕರಾವಳಿ,ರೋಟರಿ ಕ್ಲಬ್ ಶಿರ್ವ,ಯುವ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ,ಎಸ್ ಎಮ್ ವಿ ಐ ಟಿ ಎಮ್ ಬಂಟಕಲ್ಲು ಹಾಗೂ ಯುವತಿ ಮಂಡಲ ಇನ್ನಂಜೆ, ಸಮುದಾಯ ಆರೋಗ್ಯ ಕೇಂದ್ರ, ಶಿರ್ವ  ಇವುಗಳ ಸಹಯೋಗದೊಂದಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಾಗೂ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆಯ ಬಂಟಕಲ್ಲಿನಲ್ಲಿ ಜರುಗಿತು. 

ಬಂಟಕಲ್ಲು ಶ್ರೀ ಕೃಷ್ಣ ಛಾಯಾದಲ್ಲಿ ನಡೆದ ಶಿಬಿರವನ್ನು ಜಯಸ್ಮೃತಿ ಆರೋಗ್ಯ ಟ್ರಸ್ಟ್ ನ ಅಧ್ಯಕ್ಷೆ  ಪ್ರಫುಲ್ಲಾ ಜಯ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣುಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ. ಆದ್ದರಿಂದ ಅವುಗಳನ್ನು ಜತನವಾಗಿ ಕಾಪಾಡಿಕೊಳ್ಳುವುದು ಬಹುಮುಖ್ಯ ಎಂದು ಹೇಳಿದರು.

ಶಿರ್ವ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ||ಡಾ.ವಿಟ್ಠಲ್ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಸುಮಾರು 200ಮಂದಿ ನೇತ್ರ ತಪಾಸಣೆ ಮಾಡಿಸಿಕೊಂಡರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಉಡುಪಿ ಕರಾವಳಿ ಯ ಅಧ್ಯಕ್ಷರಾದ ಲಯನ್ ಶ್ರೀ ಕೆ.ಸಿ.ಅಮೀನ್  ಬಂಟಕಲ್ಲು ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕರಾದ ನಾಗರಾಜ ಭಟ್ , ಜಿಲ್ಲಾಸ್ಪತ್ರೆಯ ನೇತ್ರ ತಜ್ಞರಾದ ಡಾ.ನಿತ್ಯಾನಂದ ನಾಯಕ್, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ  ಗೀತಾ ವಾಗ್ಳೆ , ಇನ್ನಂಜೆ ಯುವತಿ ಮಂಡಲದ ಅಧ್ಯಕ್ಷೆ ಆಶಾ ನಾಯಕ್, ಜಿಲ್ಲಾಸ್ಪತ್ರೆಯ ಡಾ. ಐಶ್ವರ್ಯ, ಲಯನ್ ರವೀಂದ್ರ ಆಚಾರ್ಯ, ಸುಮಲತಾ, ರೊ||ಹೊನ್ನಯ್ಯ ಶೆಟ್ಟಿಗಾರ್, ಲಕ್ಷ್ಮೀ ನಾಯ್ಕ್ , ಬಂಟಕಲ್ಲು ನಾಗರಿಕ ಸಮಿತಿಯ ಅಧ್ಯಕ್ಷರಾದ ಕೆ.ಆರ್.ಪಾಟ್ಕರ್ ರೊ||ದಿನೇಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!