ಉಡುಪಿ: ಪಾರ್ಟ್ ಟೈಮ್ ಜಾಬ್ ಆಮಿಷ- ಯುವಕನಿಗೆ 7.30 ಲ.ರೂ. ವಂಚನೆ

ಉಡುಪಿ ಮೇ 31(ಉಡುಪಿ ಟೈಮ್ಸ್ ವರದಿ): ಕಂಪೆನಿಯೊಂದರಲ್ಲಿ ಪಾರ್ಟ್ ಟೈಮ್ ಜಾಬ್ ನೀಡುವ ನೆಪದಲ್ಲಿ ಯುವಕನೋರ್ವನಿಂದ 7.30 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಸೂರ್ಯಾನ್ಶ್ ಸುನಿಲ್ ಎಂಬವರಿಗೆ ಮೇ 20 ರಂದು ವಾಟ್ಸ್ಆಪ್ ನಲ್ಲಿ  ಬಂದಿದ್ದ ಸಂದೇಶದಲ್ಲಿ ಗ್ರೂಪ್ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿ ಇಂಡಿಯಾ ಎಂಬ ಕಂಪೆನಿಯಲ್ಲಿ ಪಾರ್ಟ್ ಟೈಮ್ ಜಾಬ್ ನಡೆಸಿ ಹಣ ಗಳಿಸುವ ಬಗ್ಗೆ ತಿಳಿಸಲಾಗಿತ್ತು. ಬಳಿಕ ಟೆಲಿಗ್ರಾಂ ಆಪ್ ನಲ್ಲಿ ಸ್ನೇಹ ಶರ್ಮಾ ಎಂಬಾಕೆ ಸೂರ್ಯಾನ್ಶ್ ಅವರನ್ನು ಸಂಪರ್ಕಿಸಿ ಕಂಪೆನಿಯಲ್ಲಿ ಟಾಸ್ಕ್ ನಡೆಸುವ ಬಗ್ಗೆ ಹಣವನ್ನು ಪಾವತಿಸುವಂತೆ ಬ್ಯಾಂಕ್ ಖಾತೆಗಳ ವಿವರವನ್ನು ನೀಡಿದ್ದಳು. ಇದನ್ನು ನಂಬಿದ ಸೂರ್ಯಾನ್ಶ್ ಅವರು ಆರೋಪಿತಳು ಸೂಚಿಸಿದ ಖಾತೆಗೆ ಹಂತ ಹಂತವಾಗಿ ಒಟ್ಟು 7,30,926 ರೂ. ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಟಾಸ್ಕ್ ನಡೆಸಿದ ಬಳಿಕ ಹಣವನ್ನೂ ನೀಡದೆ,  ವರ್ಗಾವಣೆ ಮಾಡಿರುವ ಹಣವನ್ನು ವಾಪಾಸು ನೀಡದೆ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!