ಉಡುಪಿ: ಜಿಲ್ಲೆಯ ವಿವಿಧೆಡೆ ಮಟ್ಕಾ ಜುಗಾರಿ-7 ಮಂದಿ,9 ಸಾವಿರ ನಗದು ವಶ

ಉಡುಪಿ ಮೇ 28(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ವಶಕ್ಕೆ ಪಡೆದು ಒಟ್ಟು 9025 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾಪು ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಏಣಗುಡ್ಡೆ ಗ್ರಾಮದ ಕಟಪಾಡಿ ಹಳೆಯ ಮೀನುಮಾರುಕಟ್ಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ಕೋಟೆ ಗ್ರಾಮದ ರವಿ ಪೂಜಾರಿ (50) ಯನ್ನು ಹಾಗೂ ಆತನ ಬಳಿ ಇದ್ದ 990 ರೂ. ನಗದನ್ನು ಮತ್ತು ಪಡು ಗ್ರಾಮದ  ಕಾಪು ಪೇಟೆಯಲ್ಲಿರುವ ಕೆ.ವಿ.ಕೆ ತರಕಾರಿ ಅಂಗಡಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಶ್ರೀನಿವಾಸ(35) ನನ್ನು  ಆತನ ಬಳಿ ಇದ್ದ 1010 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಬ್ರಹ್ಮಾವರ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಚಾಂತಾರು ಗ್ರಾಮದ ಬ್ರಹ್ಮಾವರ ಪೇಟೆಯ ಕುಂಜಾಲು ಕ್ರಾಸ್‌‌ನ ಸಾರ್ವಜನಿಕ ಸ್ಥಳದಲ್ಲಿ ರತ್ನರಾಜ್‌ ನನ್ನು ಹಾಗೂ ಆತನ ಬಳಿ ಇದ್ದ 1130 ರೂ. ನಗದನ್ನು ಮತ್ತು ಉಡುಪಿ ನಗರ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ 76 ಬಡಗುಬೆಟ್ಟು ಗ್ರಾಮದ ಚಿಟ್ಪಾಡಿ ಡಯಾನ ಟಾಕೀಸ್‌ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ನಾಗೇಶ್ ಎಂಬಾತನನ್ನು ವಶಕ್ಕೆ ಪಡೆದು ಆತ  ಸಂಗ್ರಹಿಸಿದ 1205‌ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಮಣಿಪಾ‌ಲ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಸಿಂಡಿಕೇಟ್‌ ಸರ್ಕಲ್‌ ಬಳಿ ಯತೀಶ್‌ ಮೆಂಡನ್‌ ಎಂಬಾತನು ಹಾಗೂ ಆತನ ಬಳಿ ಇದ್ದ 820 ರೂ. ನಗದನ್ನು, ಕೋಟ ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಪಾಂಡೇಶ್ವರ ಗ್ರಾಮದ ಸಾಸ್ತಾನ ಗೋಳಿಗರಡಿ ರಸ್ತೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಹಾಬಲ ಪೂಜಾರಿ ಎಂಬಾತನನ್ನೂ ಆತನ ಬಳಿಯಿಂದ 2,450 ರೂ. ಹಣವನ್ನು ಮತ್ತು ಬೈಂದೂರು ಠಾಣಾ ಪೊಲೀಸರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿನ ಫಿಶ್‌ ಮಾರ್ಕೇಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪಾಂಡುರಂಗ ಎಂಬಾತನನ್ನು ಹಾಗೂ ಆತ ಸಂಗ್ರಹಿಸಿದ 1420 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. 

ಈ ಎಲ್ಲಾ7 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಕಾಪು ಠಾಣೆಯಲ್ಲಿ ಎರಡು ಹಾಗೂ ಬ್ರಹ್ಮಾವರ ಠಾಣೆ, ಉಡುಪಿ ನಗರ ಠಾಣೆ, ಮಣಿಪಾಲ ಠಾಣೆ, ಕೋಟ ಠಾಣೆ, ಬೈಂದೂರು  ಠಾಣೆಗಳಲ್ಲಿ ತಲಾ ಒಂದು ಸೇರಿ ಒಟ್ಟು 7 ಪ್ರತ್ಯೇಕ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!