ಅಲೆವೂರು ಗಣೇಶೋತ್ಸವ ಸಮಿತಿ: ಸಭಾಂಗಣಕ್ಕೆ ಇಂಟರ್ಲಾಕ್ ಮತ್ತು ಕಾಂಕ್ರೀಟೀಕರಣದ ಗುದ್ದಲಿ ಪೂಜೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ಅಲೆವೂರು ಗುಡ್ಡೆಅಂಗಡಿಯಲ್ಲಿರುವ ಗಣೇಶೋತ್ಸವ ಸಮಿತಿಯ ಸಂಕಲ್ಪ ಸಭಾಂಗಣದ ಮುಂಭಾಗಕ್ಕೆ ಇಂಟರ್ಲಾಕ್ ಮತ್ತು ಕಾಂಕ್ರೀಟೀಕರಣದ ಗುದ್ದಲಿ ಪೂಜೆಯನ್ನು ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುಷ್ಪ ಅಂಚನ್ ನೆರವೇರಿಸಿದರು.
ಸುಮಾರು 5 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಗ್ರಾಮ ಪಂಚಾಯಿತಿ ವತಿಯಿಂದ ನಡೆಯಲಿದೆ ವಿಷ್ಣುಮೂರ್ತಿ ದೇವಸ್ಥಾನದ ತಂತ್ರಿಗಳಾದ ರಾಘವೇಂದ್ರ ಭಟ್ ರವರು ಸತ್ಯನಾರಾಯಣ ಪೂಜೆಯನ್ನು ನಡೆಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸುಧಾಕರ್ ಪೂಜಾರಿ ಪಂಚಾಯತ್ ಸದಸ್ಯರುಗಳಾದ ಯತೀಶ್ ಕುಮಾರ್, ಜಲೇಶ್ ಶೆಟ್ಟಿ ಪ್ರಶಾಂತ ಆಚಾರ್ಯ, ಶಬರೀಶ್, ರೂಪೇಶ್ ದೇವಾಡಿಗ, ದುಂಡಪ್ಪ ಬಿದರಿ, ಶಾಮಲಾ ಸುಧಾಕರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರು ಮಾಜಿ ಪಂಚಾಯತ್ ಅಧ್ಯಕ್ಷರುಗಳಾದ ಹರೀಶ್ ಕಿಣಿ, ಹರೀಶ್ ಸೇರಿಗಾರ್ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರೂಪೇಶ್ ಆಚಾರ್ಯ, ಕಾರ್ಯದರ್ಶಿ ರಂಜಿತ್ ನಾಯಕ್, ಗೌರವಾಧ್ಯಕ್ಷರಾದ ಶೇಖರ್ ಕಲ್ಮಾಡಿ ಉಪಸ್ಥಿತರಿದ್ದರು.