ಮುಲ್ಕಿ: ಟಿಪ್ಪರ್ ಹರಿದು ವ್ಯಕ್ತಿ ಸಾವು

ಮುಲ್ಕಿ :  ಟಿಪ್ಪರ್ ಅಡಿಗೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಲ್ಕಿಯ ಪಕ್ಷಿಕೆರೆಯಲ್ಲಿ ಇಂದು (ಮಾ.22) ನಡೆದಿದೆ. ಮಧ್ಯ ಪ್ರದೇಶ ಮೂಲದ ರಾಮಪ್ರಸಾದ್(28) ಮೃತಪಟ್ಟ ಕಾರ್ಮಿಕ. ಸ್ಥಳೀಯ ನಿವಾಸಿ ಸುಲೈಮಾನ್ ಎಂಬವರಿಗೆ ಸೇರಿದ ಜಮೀನನ್ನು ಮನೆ ನಿವೇಶನಕ್ಕಾಗಿ ಸಮತಟ್ಟು ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಜೇಸಿಬಿ ಸಹಾಯದಿಂದ ಸಮತಟ್ಟು ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ನಡಿಗೆ ಬಿದ್ದ ರಾಮಪ್ರಸಾದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಬೆಟಿ ನೀಡಿದದ್ದು, ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!