ಉಡುಪಿಯಲ್ಲಿ ಕೊರೋನಾ ಸ್ಫೋಟ : ಒಂದೇ ದಿನದಲ್ಲಿ 170 ಪ್ರಕರಣಗಳು ದೃಢ
ಉಡುಪಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 170 ಪ್ರಕರಣಗಳು ಪಾಸಿಟಿವ್ ಎಂದು ದ್ರಢಪಟ್ಟಿದೆ
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಇದುವರೆಗೆ 3,95,042 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಭಾನುವಾರ 170 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 24,215 ಕ್ಕೆ ತಲುಪಿದೆ. ಈ ಪೈಕಿ 358 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಆಸ್ಪತ್ರೆಗಳಿಂದ ಭಾನುವಾರ ಒಟ್ಟು 24 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಕೆ ಸಂಖ್ಯೆ 23,667 ಕ್ಕೆ ತಲುಪಿದೆ. ಕೊರೊನಾ ವೈರಸ್ನಿಂದ ಜಿಲ್ಲೆಯಲ್ಲಿ ಇದುವರೆಗೆ 190 ಸಾವುಗಳು ಸಂಭವಿಸಿವೆ.