ಅನ್ಯ ಕೋಮಿನ ಯುವಕ ರೊಂದಿಗೆ ಯುವತಿ ಬಸ್ಸಿನಲ್ಲಿ ಪ್ರಯಾಣ; ಭಜರಂಗದಳ ದಾಳಿ
ಮಂಗಳೂರು: ಅನ್ಯ ಕೋಮಿನ ಯುವಕರೊಂದಿಗೆ ಯುವತಿಯೊಬ್ಬಳು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಭಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಹುಡುಗಿಯೊಬ್ಬಳು ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ತೆರಳುತ್ತಿದ್ದಾಳೆ ಎನ್ನುವ ಮಾಹಿತಿ ಪಡೆದ ಬಂಟ್ವಾಳ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಯುವತಿ ಹಾಗೂ ಯುವಕರನ್ನು ಪೊಲೀಸರಿಗೊಪ್ಪಿಸಿದ್ದಾರೆ. ಇನ್ನು ಇವರು ಯಾವ ಉದ್ದೇಶಕ್ಕಾಗಿ ತೆರಳುತ್ತಿದ್ದರು ಹಾಗೂ ಯುವಕರು ಮತ್ತು ಯುವತಿ ಎಲ್ಲಿಯವರು ಎನ್ನುವ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.