ಉಡುಪಿ; ಮಾರ್ಚ್ 22 ರಿಂದ 28 ರ ವರೆಗೆ ರಂಗಹಬ್ಬ-9 ನಾಟಕೋತ್ಸವ

ಉಡುಪಿ( ಉಡುಪಿ ಟೈಮ್ಸ್ ವರದಿ): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ನಗರಸಭೆ ಉಡುಪಿ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಇದರ ಸಹಯೋಗದೊಂದಿಗೆ ಸುಮನಸಾ ಕೊಡವೂರು ನಾಟಕೋತ್ಸವ ಸಂಸ್ಥೆಯ ವತಿಯಿಂದ ಮಾ. 22ರಿಂದ 28 ರ ವೆರೆಗೆ ಸಂಜೆ 6.30ಕ್ಕೆ ರಂಗಹಬ್ಬ-9 ಎಂಬ ನಾಟಕೋತ್ಸವನ್ನು ಹಮ್ಮಿಕೊಂಡಿರುವುದಾಗಿ ಸುಮನಸಾದ ಗೌರವಾಧ್ಯಕ್ಷ ಎಮ್.ಎಸ್.ಭಟ್ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಇಂದು ( ಮಾ.19) ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಅವರು. ಈ ನಾಟಕೋತ್ಸವದ ಸಭಾ ಕಾರ್ಯಕ್ರ ಸಂಜೆ 6.30 ಕ್ಕೆ ಆರಂಭಗೊಳ್ಳಲಿದ್ದು, 7 ಗಂಟೆಯಿಂದ ನಾಟಕ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ಕಲಾ ಪೋಷಕ ಆನಂದ ಸಿ.ಕುಂದರ್ ಅವರು ಉದ್ಘಾಟಿಸಲಿದ್ದಾರೆ. ನಾಟಕೋತ್ಸವದಲ್ಲಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇನ್ನು ಈ ನಾಟಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ವಹಿಸಲಿದ್ದಾರೆ. ಈ ನಾಟಕೋತ್ಸವದಲ್ಲಿ ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಂಗ್ ಬ್ಯಾಗ್‍ನ ಕೊಡುಗೆಯೊಂದಿಗೆ ನೀಡಲಾಗುತ್ತದೆ.


ಈ ನಾಟಕೋತ್ಸವದಲ್ಲಿ ಯಕ್ಷಗಾನ ಉನ್ನತಿಗೆ ಸದಾ ಶ್ರದ್ಧಾ ಬದ್ಧರಾಗಿ, ಸೃಜನಶೀಲತೆಯ ಪ್ರತೀಕವಾಗಿದ್ದ ಯು.ದುಗ್ಗಪ್ಪ ರವರ ನೆನಪಿನಲ್ಲಿ “ಯಕ್ಷಸುಮ” ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿರ್ತಿ ಬಾಲಕೃಷ್ಣ ಗಾಣಿಗ ಅವರಿಗೆ ಕೊಡ ಮಾಡಲಾಗುವುದು ಹಾಗೂ ಪ್ರತಿದಿನ ರಂಗ ಸಾಧಕರೊಬ್ಬರನ್ನು ಸನ್ಮಾನಿಸಲಾಗುವುದು, ನವ ಚಿಗುರುಗಳಲ್ಲಿರುವ ರಂಗಾಸಕ್ತಿ ಪ್ರಸ್ತುತಿಗೊಳ್ಳಲೆಂದು ಕಾಲೇಜು ವಿದ್ಯಾರ್ಥಿಗಳಿಗೆ ಕಿರು ಪ್ರಹಸನ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯು ಮಾರ್ಚ್ 27 ರಂದು 2 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ ಎಂದು ತಿಳಿಸಿದರು.


ಇನ್ನು ಮಾರ್ಚ್ 26 ರ ಸಮಾರಂಭದಲ್ಲಿ ಪರ್ತಕರ್ತ ಬಾಲಕೃಷ್ಣ ಶಿಬಾರ್ಲ ಅವರ “ಕಾಪ” ತುಳು ನಾಟಕ ಕೃತಿಯನ್ನು ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ.
ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳು:
ಮಾರ್ಚ್ 22 : ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ – ಸಂತೋಷ ನಾಯಕ್ ಪಟ್ಟ ನಿರ್ದೇಶನದ ಕನ್ನಡ ನಾಟಕ ಗೆಲಿಲಿಯೊ
ಮಾರ್ಚ್ 23: ಸುಮನಸಾ ಕೊಡವೂರು, ಉಡುಪಿ -ಜೋಸೆಫ್ ನಿರ್ದೇಶನದ ಕನ್ನಡ ನಾಟಕ ನೆರಳಿಲ್ಲದ ಮನುಷ್ಯರು
ಮಾರ್ಚ್ 24: ದಿವ್ಯರಂಗ ಬೆಂಗಳೂರು ಜೋಸೆಫ್ ನಿರ್ದೇಶನದ ಕನ್ನಡ ನಾಟಕ ಮಾಯಾ ಮೋಹ ಜಾಲ
ಮಾರ್ಚ್ 25: ಸುಮನಸಾ ಕೊಡವೂರು ಉಡುಪಿ -ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದ ಕನ್ನಡ ಯಕ್ಷನಾಟಕ ರಾಮ ಭಕ್ತ ಜಾಂಬವಂತ
ಮಾರ್ಚ್ 26: ಭೂಮಿಕಾ (ರಿ.) ಹಾರಾಡಿ, – ಬಿ.ಎಸ್.ರಾಮ್ ಶೆಟ್ಟಿ ನಿರ್ದೇಶನದ ಕನ್ನಡ ನಾಟಕ ನಮ್ಮ ನಿಮ್ಮೊಳಗೊಬ್ಬ
ಮಾರ್ಚ್ 27: ಸುಮನಸಾ ಕೊಡವೂರು, ಉಡುಪಿ – ವಿದ್ದು ಉಚ್ಚಿಲ್ ನಿರ್ದೇಶನದ ಕನ್ನಡ ನಾಟಕ ಕರುಳ ತೆಪ್ಪದ ಮೇಲೆ
ಮಾರ್ಚ್ 28: ಸನ್ನಿಧಿ ಕಲಾವಿದರು – ರವಿಕುಮಾರ್ ಕಡೆಕಾರ್ ನಿರ್ದೇಶನದ ತುಳು ನಾಟಕ ಮಾಯೊದ ಜೊಲ್ಪು
ಈ ಎಲ್ಲಾ ನಾಟಕಗಳು ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ – ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ವಿನಯ್ ಕುಮಾರ್, ಜೊತೆ ಕಾರ್ಯದರ್ಶಿ ಕುಮಾರಿ ಪ್ರಜ್ಞಾ, ಕೋಶಾಧಿಕಾರಿ-ಚಂದ್ರಕಾಂತ್ ಕುಂದರ್, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು.

1 thought on “ಉಡುಪಿ; ಮಾರ್ಚ್ 22 ರಿಂದ 28 ರ ವರೆಗೆ ರಂಗಹಬ್ಬ-9 ನಾಟಕೋತ್ಸವ

Leave a Reply

Your email address will not be published. Required fields are marked *

error: Content is protected !!