ಮಹಿಳಾ ಇನ್ಸ್ ಪೆಕ್ಟರ್ ಕರ್ತವ್ಯಕ್ಕೆ ಅಡ್ಡಿ ಆರೋಪ ವಕೀಲರೊಬ್ಬರ ವಿರುದ್ದ ದೂರು ದಾಖಲು
ಮಂಗಳೂರು: ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ವಕೀಲರೊಬ್ಬರ ವಿರುದ್ದ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ, ಮಂಗಳೂರಿನಲ್ಲಿರುವ ಮರ್ವಿನ್ ಜರಾರ್ಡ್ ಸಾವಿಯೋ ಸಿಕ್ವೇರ್ ಅವರು ವಾಸಿಸುತ್ತಿರುವ ಅಪಾರ್ಟ್ ಮೆಂಟ್ ನ್ನು ತಪಾಸಣೆ ನಡೆಸಲು ಹಾಸನದ ಮಹಿಳಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ತೆರಳಿದ್ದರು.
ಈ ವೇಳೆ ಅಪಾರ್ಟ್ ಮೆಂಟ್‍ನಲ್ಲಿ ಮಹಿಳಾ ಇನ್ಸ್ ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಕೀಲ ಪ್ರವೀಣ್ ಪಿಂಟೋ ಅವರು ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ
ಆರೋಪಿ ಮರ್ವಿನ್ ಜರಾರ್ಡ್ ಸಾವಿಯೋ ಸಿಕ್ವೇರ್ ಹಾಗೂ ಅವರ ತಾಯಿ ಐರಿನ್ ಸಿಕ್ವೇರಾ ಅವರ ಪರ ವಕೀಲ ಪ್ರವೀಣ್ ಪಿಂಟೋ ಪೊಲೀಸರಿಗೆ ಸಾರ್ವಜನಿಕರ ಮುಂದೆ ಅವಾಚ್ಯ ಪದ ಬಳಸಿ ನಿಂದಿಸಿದ್ದು ಮಾತ್ರವಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿಚಾರಣೆಗೆ ಅಪಾರ್ಟ್‍ಮೆಂಟ್‍ಗೆ ಹೋದ ವೇಳೆ ಮಹಿಳಾ ಇನ್ಸ್ ಪೆಕ್ಟರ್ ಅವರೊಂದಿಗೆ ಮಂಗಳೂರು ಪೂರ್ವ ಠಾಣಾ ಹೊಯ್ಸಳ-2 ಕರ್ತವ್ಯದ ಮಹೆಚ್ ಸಿ ಚಂದ್ರಾವತಿ ಹಾಗೂ ಎಸಿಪಿ ಈರಣ್ಣ, ದೂರುದಾರರಾದ ಜಾಸ್ಮಿನ್ ರೋಡ್ರಿಗಸ್, ಆಕೆಯ ತಂದೆ ಪೆಲಿಕ್ಸ್ ರೋಡ್ರಿಗಸ್ ಹಾಗೂ ಸಾಕ್ಷಿಗಳಾದ ಎವ್ರೀಸ್ ರೋಡ್ರಿಗಸ್ ಹಾಗೂ ಪ್ರಮೋದ್ ಇದ್ದರು.
ಇದೀಗ ವಕೀಲರೊಬ್ಬರು ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಅವರ ಕರ್ತವ್ಯಕ್ಕೆ ಅಡ್ಡಿಸಿದ ಹಿನ್ನೆಲೆಯಲ್ಲಿ ವಕೀಲ ಪ್ರವೀಣ್ ಪಿಂಟೋ ಅವರ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.