ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್ ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಗಂಗೊಳ್ಳಿ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಪಾಂಡು (47) ಮೃತಪಟ್ಟ ಮೀನುಗಾರ. ಇವರು ಮಾ.7 ರಂದು ಇತರ ಮೀನುಗಾರರೊಂದಿಗೆ ಸಾಗರದೀಪ ಎಂಬ ಪರ್ಶಿಯನ್ ಬೋಟ್ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಗಂಗೊಳ್ಳಿ ಬಂದರ್ನಿಂದ 5 ಕಿ.ಮಿ ದೂರ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಬೋಟ್ ಅಲುಗಾಡಿದ್ದು, ಬೋಟ್ನಲ್ಲಿದ್ದ ಪಾಂಡು ಅವರು ಆಕಸ್ಮಿಕವಾಗಿ ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ.
ಈ ವೇಳೆ ಪಾಂಡು ಅವರನ್ನು ಬೋಟ್ನಲ್ಲಿದ್ದ ಇತರ ಮೀನುಗಾರರು ಹುಡುಕಾಡಿದ್ದರೂ ಅವರು ಪತ್ತೆಯಾಗಿರಲಿಲ್ಲ. ಬಳಿಕ ಮಾ.9 ರಂದು ಸಂಜೆ ವೇಳೆಗೆ ಗಂಗೊಳ್ಳಿ ಬಂದರಿನಿಂದ ಸುಮಾರು 4 ಕಿಮಿ ದೂರ ಸಮುದ್ರದಲ್ಲಿ ಪಾಂಡು ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.