ವಿಧಾನಸಭೆಯೊಳಗೆ ಪ್ರತಿಭಟನೆ:16 ಕಾಂಗ್ರೆಸ್ ಶಾಸಕರ ಅಮಾನತು
ಗಾಂಧಿನಗರ ಮಾ.27 : ಗುಜರಾತ್ ವಿಧಾನಸಭೆಯೊಳಗೆ ಪ್ರತಿಭಟನೆ ನಡೆಸಿದ 16 ಮಂದಿ ಕಾಂಗ್ರೆಸ್ ಶಾಸಕರನ್ನು ಮಾ.29 ರ ವರೆಗೆ ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ.
ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಇಂದು ಇಮ್ರಾನ್ ಖೇಡವಾಲ, ಗೆನಿಬೆನ್ ಠಾಕೋರ್ ಮತ್ತು ಅಮೃತ್ಜಿತ್ ಠಾಕೋರ್ ಸೇರಿ ಕೆಲವು ಕಾಂಗ್ರೆಸ್ ಶಾಸಕರು ಸ್ಪೀಕರ್ ಪೀಠದ ಎದುರು ಬಂದು ಕುಳಿತು ಮೋದಿ-ಆದಾನಿ ಅಣ್ಣ ತಮ್ಮ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಸ್ಪೀಕರ್ ಶಂಕರ್ ಚೌಧರಿ ಅವರು ತಮ್ಮ ಸ್ಥಾನಗಳಿಗೆ ಮರಳುವಂತೆ ಸ್ಪೀಕರ್ ಹಲವು ಬಾರಿ ಮನವಿ ಮಾಡದರೂ ಅವರು ಯಾವುದೇ ಪ್ರಯೋಜನ ವಾಗಿರಲಿಲ್ಲ. ಬಳಿಕ ಅವರನ್ನು ಮಾರ್ಷಲ್ಗಳ ಸಹಾಯದಿಂದ ವಿಧಾನಸಭೆಯಿಂದ ಹೊರಗೆ ಕಳುಹಿಸಲಾಯಿತು.
ಕಪ್ಪುಪಟ್ಟಿ ಕಟ್ಟಿಕೊಂಡು ವಿಧಾನಸಭೆಯನ್ನು ಪ್ರವೇಶಿಸಿದ ಕಾಂಗ್ರೆಸ್ ಶಾಸಕರು, ಅಧಿವೇಶನದ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಮಿತ್ ಛಾವ್ಡಾ ಅವರು ರಾಹುಲ್ರನ್ನು ಅನರ್ಹಗೊಳಿಸಿದ್ದರು. ಹಾಗೂ ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿದರು. ಪ್ರಶೋತ್ತರ ಅವಧಿಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ ಸ್ಪೀಕರ್ ಅವರು, ಅಮಿತ್ ಅವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ಇದೇ ವೇಳೆ ಸ್ಪೀಕರ್ ಪೀಠದ ಎದುರು ಬಂದ ಇತರ ಶಾಸಕರು ಘೋಷಣೆಗಳನ್ನು ಕೂಗಿದರು ಮತ್ತು ಫಲಕಗಳನ್ನು ಪ್ರದರ್ಶಿಸಿದರು. ಅವರಿಗೆ ಹೊರಹೋಗುವಂತೆ ಸುಚಿಸಿದ ಸ್ಪೀಕರ್ ದಿನದ ಮಟ್ಟಿ ಅಮಾನತು ಗೊಳಿಸಿದ್ದರು.
ಪ್ರಶೋತ್ತರ ಅವಧಿ ಮುಗಿದ ಬಳಿಕ ಕಾಂಗ್ರೆಸ್ ಶಾಸಕರ ವರ್ತನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯಹಾರಗಳ ಸಚಿವ ಋಷಿಕೇಶ್ ಪಟೇಲ್ ಅವರು, ದುರ್ವತ್ರನೆ ತೋರಿದ ಎಲ್ಲರನ್ನೂ ಬಜೆಟ್ ಅಧಿವೇಶ ಮುಗಿಯುವವರೆಗೆ ಅಮಾನತುಗೊಳಿಸಬೇಕು ಎಂದು ಸ್ಪೀಕರ್ಗೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಸ್ಪೀಕರ್, 16 ಶಾಸಕರನ್ನು ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದರು.