ಮುಂಬೈ: ಭೂಗತ ಪಾತಕಿ ರವಿ ಪೂಜಾರಿ ಮುಂಬೈ ಪೊಲೀಸ್ ಕಸ್ಟಡಿಗೆ
ಮುಂಬೈ: ಬೆಂಗಳೂರು ಪೊಲೀಸರ ಬಳಿ ಇದ್ದ ಭೂಗತ ಪಾತಕಿ ರವಿ ಪೂಜಾರಿನ್ನು ಮುಂಬೈ ಪೊಲೀಸರ ಕಸ್ಟಡಿಗೆ ಪಡೆಯಬೇಕು ಎಂಬ ಅಲ್ಲಿನ ಪೊಲೀಸರ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಮುಂಬೈನಲ್ಲಿ 80 ಕ್ಕೂ ಹೆಚ್ಚು ಕೇಸ್ ಗಳ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ರವಿ ಪೂಜಾರಿಯನ್ನ ಇಂದು (ಫೆ.23) ಬೆಳಗ್ಗೆ ಮುಂಬೈಗೆ ಕರೆತರಲಾಗಿದೆ.
ಕಳೆದ ವಾರ ಬೆಂಗಳೂರು ಕೋರ್ಟ್ನಲ್ಲಿ ಸುದೀರ್ಘ ಒಂದು ವರ್ಷದ ವಾದ – ವಿವಾದದ ಬಳಿಕ ರವಿ ಪೂಜಾರಿಯನ್ನು ಮುಂಬೈ ಪೊಲೀಸರ ಕಸ್ಟಡಿ ನೀಡಲಾಗಿದ್ದು, ಮಾರ್ಜ್ 9 ರ ವರೆಗೆ ರವಿ ಪೂಜಾರಿ ಮುಂಬೈ ಪೊಲೀಸರ ಕಸ್ಟಡಿಯಲ್ಲಿ ಇರಲಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಅಪರಾಧ ವಿಭಾಗದ ಜಂಟಿ ಕಮಿಷನರ್ ಮಿಲಿಂದ್ ಭಾರಂಬೆ ಅವರು, ರಾಜು ಪೂಜಾರಿ ಕಸ್ಟಡಿಗಾಗಿ ನಾವು 1 ವರ್ಷಗಳಿಂದ ಕಾಯುತ್ತಲೇ ಇದ್ದೇವೆ. ಕೊನೆಗೂ ನಮ್ಮ ಕಾಯುವಿಕೆ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ.
ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ 59 ವರ್ಷದ ಭೂಗತಪಾತಕಿ ರವಿ ಪೂಜಾರಿಯನ್ನ 2020ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪೊಲೀಸರು ಸೆನೆಗಲ್ ನಲ್ಲಿ ಬಂದಿಸಿ ಬೆಂಗಳೂರಿಗೆ ಕರೆ ತಂದಿದ್ದರು