ಸಾರಾಯಿ , ಇಸ್ಪೀಟು, ಜೂಜು ದುಶ್ಚಟ ಬಿಡಿಸುವಂತೆ ಭಕ್ತನಿಂದ ದೇವರಿಗೆ ಪತ್ರ

ವಿಜಯಪುರ: ದುಶ್ಚಟಗಳ ದಾಸರಾಗಿರುವವರು ಅದರಿಂದ ಹೊರ ಬರಬೇಕು ಎಂದು ಇಚ್ಚಿಸುವವರು ತಜ್ಞರ ಬಳಿ ಹೋಗುತ್ತಾರೆ. ಇಲ್ಲಾ ಅಂದರೆ ರೀಹ್ಯಾಬಿಟೇಶನ್ ಟೆಂಟರ್ ಗಳಿಗೆ ತೆರಳಿ ತರಬೇತಿ ಪಡೆದು ಗುಣಮುಖರಾಗುತ್ತರೆ. ಆದರೆ ಇಲ್ಲೊಬ್ಬ ತನ್ನ ದುಶ್ಚಟಗಳಿಂದ ತನ್ನನ್ನು ಪಾರು ಮಾಡುವಂತೆ ದೇವರಿಗೆ ಪತ್ರ ಬರೆದು ಕೋರಿಕೆ ಸಲ್ಲಿಸಿದ್ದಾರೆ.

ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರು ಆಂಜನೇಯ ದೇಗುಲದಲ್ಲಿ. ದೇವಸ್ಥಾನದಲ್ಲಿ ಉಪವಿಭಾಗಾಧಿಕಾರಿ ಬಲರಾಮ್  ರಾಠೋಡ, ನಿಡಗುಂದಿ ತಹಶಿಲ್ದಾರ್ ಶಿವಲಿಂಗಪ್ರಭು ವಾಲಿ ಸಮ್ಮುಖದಲ್ಲಿ ಹುಂಡಿಯ ಹಣ ಏಣಿಕೆ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ಕಾಣಿಕೆ ಹುಂಡಿಯಲ್ಲಿ ಹಣದ ಜೊತೆಗೆ ಭಕ್ತರು ಆಂಜನೇಯನಿಗೆ ಬರೆದ ಪತ್ರಗಳು ಪತ್ತೆಯಾಗಿದೆ.

 ಈ ವೇಳೆ ಇಲ್ಲಿ ಸಿಕ್ಕ ಒಂದು ಪತ್ರದಲ್ಲಿ ಭಕ್ತನೋರ್ವ “ಸಾರಾಯಿ ಕುಡಿಯುತ್ತೇನೆ, ಇಸ್ಪೀಟು, ಜೂಜು ಆಡುತ್ತೇನೆ”. ಈ ದುಶ್ಚಟ ಬಿಡಿಸು ಎಂದು ಬರೆದಿದ್ದಾನೆ. ಜೊತೆಗೆ ಇನ್ನೋರ್ವ ಭಕ್ತ ಬಾಳೇಶ ಎಂಬ ಯುವಕ ನನ್ನ ಶರ್ಟ್ ಮೇಲೆ ‘ಒಂದು ಸಿಂಹ’ ‘ಒಂದು ಸ್ಟಾರ್’ ಬರುವ ಹಾಗೇ (ಐಪಿಎಸ್) ಮಾಡಪ್ಪ ಎಂದು ಬೇಡಿಕೊಂಡಿದ್ದಾನೆ. ಒಂದು ವರ್ಷದಲ್ಲಿ ಸರ್ಕಾರಿ ನೌಕರಿ ಸಿಕ್ಕರೆ ಎರಡನೇ ಸಂಬಳ ನಿನಗೆ ಮೀಸಲು, ಅಲ್ಲದೆ ನಡೆದುಕೊಂಡು ಬಂದು ಹರಕೆ ತೀರುಸುತ್ತೇನೆ ಎಂದು ಪತ್ರ ಬರೆದಿದ್ದಾನೆ. ಇದೇ ರೀತಿ ಅನೇಕ ವಿಚಿತ್ರ ಪತ್ರಗಳು ಆಂಜನೇಯ ಕೃಪೆಗಾಗಿ ಹುಂಡಿಯಲ್ಲಿ ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
   ಯಾವುದೇ ದುಶ್ಚಟದಿಂದ ಹೊರ ಬರಲು ವ್ಯಕ್ತಿ ಸ್ವಯಂ ಪ್ರೇರಿತವಾಗಿ ಇಚ್ಚಾಶಕ್ತಿಯನ್ನು ಹೊಂದಿರಬೇಕು. ಇದು ಯಾರೋ ಹೇಳಿ ಮಾಡಿಸುವಂತದಲ್ಲ. ಎಲ್ಲಿಯವರೆಗೆ ವ್ಯಕ್ತಿ ತಾನಾಗಿ ದುಶ್ಚಟಗಳಿಂದ ಹೊರ ಬರುವುದಿಲ್ಲವೋ ಅಲ್ಲಿಯ ವರೆಗೆ ಯಾರೂ ಆತನನ್ನು ದುಶ್ಚಟಗಳ ಸಂಕೋಲೆಯಿಂದ ಬಿಡಿಸಲು ಸಾಧ್ಯವಿಲ್ಲ. 

Leave a Reply

Your email address will not be published. Required fields are marked *

error: Content is protected !!