ಪುತ್ತೂರು: ಪತ್ರಕರ್ತರನ್ನೂ ಕಾಡಿದ ಹ್ಯಾಕರ್ಸ್ ಗಳು
ಪುತ್ತೂರು (ಉಡುಪಿ ಟೈಮ್ಸ್ ವರದಿ) : ಇತ್ತೀಚೆಗೆ ಹ್ಯಾಕರ್ಸ್ ಗಳ ಹಾವಳಿ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಪೊಲೀಸರ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿದ್ದ ಹ್ಯಾಕರ್ ಗಳು ಇದೀಗ ಪತ್ರಕರ್ತರ ಬೆನ್ನು ಬಿದ್ದಿದ್ದಾರೆ.
ಪತ್ರಕರ್ತರ ಫೇಸ್ ಬುಕ್ ಖಾತೆಗಳಿಗೆ ಕನ್ನವಿಟ್ಟಿರುವ ಹ್ಯಾಕರ್ಸ್ಗಳು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪತ್ರಿಕೆಯೊಂದರ ವರದಿಗಾರರಾಗಿರುವ ಐ.ಬಿ. ಸಂದೀಪ್ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಹ್ಯಾಕರ್ಗಳು ಸಂದೀಪ್ ಅವರ ಹೆಸರಿನಲ್ಲಿ ಪತ್ಯೇಕ ಖಾತೆ ತೆರೆದು ಅವರ ಆಪ್ತರಲ್ಲಿ ಹಣದ ಬೇಡಿಕೆಯಿಟ್ಟಿದ್ದಾರೆ. ವಂಚಕರು ಮೊದಲಿಗೆ ಸಂದೀಪ್ ಅಪ್ತರಲ್ಲಿ ನನಗೆ 12 ಸಾವಿರ ರೂ. ತುರ್ತು ಹಣದ ಅಗತ್ಯವಿದೆ. ಗೂಗಲ್ ಪೇ ಖಾತೆಯ ಮೂಲಕ ನನಗೆ ವರ್ಗಾಯಿಸಿ, ನಾಳೆ ಖಂಡಿತಾ ವಾಪಸ್ ಮಾಡುತ್ತೇನೆ ಎಂಬ ಮೆಸೇಜ್ ಹಾಕಿದ್ದಾರೆ.
ಈ ವೇಳೆ ಹಣ ಕಳುಹಿಸಲು ಮುಂದಾದ ಆಪ್ತರು ಅನುಮಾನಗೊಂಡು ನೇರ ಸಂದೀಪ್ ಅವರಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ವಂಚಕರ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಅಲರ್ಟ್ ಆದ ಸಂದೀಪ್, ತಮ್ಮ ಆಪ್ತವಲಯದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ. ಅಲ್ಲದೆ ಯಾರೇ ಆದರೂ ಹಣ ಕೇಳಿದಲ್ಲಿ ತಮ್ಮನ್ನು ನೇರ ಸಂಪರ್ಕಿಸುವಂತೆ ಹೇಳಿಕೊಂಡಿದ್ದಾರೆ.