ಆರ್ಥಿಕ ಸಮಸ್ಯೆಗೆ ನೊಂದು ಸಹಕಾರ ಸಾರಿಗೆ ಚಾಲಕ ಆತ್ಮಹತ್ಯೆ

ಚಿಕ್ಕಮಗಳೂರು: ಮಲೆನಾಡಿನ ಪ್ರಮುಖ ಸಹಕಾರಿ ಉದ್ಯಮವಾಗಿದ್ದ ಕೊಪ್ಪದ ಸಹಕಾರ ಸಾರಿಗೆ ಚಾಲಕನೊಬ್ಬ ನಿರುದ್ಯೋಗ ಸಮಸ್ಯೆಯಿಂದ ಬಸವಳಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

ಕೊಪ್ಪದ ಗಡಿಕಲ್‌ನ ಗೋಪಾಲ ಪೂಜಾರಿ (55) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕನಾಗಿದ್ದು ಇವರು ಸಹಕಾರ ಸಾರಿಗೆಯಲ್ಲಿ ದಿನಗೂಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ಇವರು ತಮ್ಮ ಸೋದರನ ಮನೆಯಲ್ಲಿ ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ.

ಮೃತರಿಗೆ ಪತ್ನಿ, ಮಗ, ಮಗಳು ಇದ್ದು ಸಹಕಾರ ಸಾರಿಗೆ ಸ್ಥಗಿತವಾಗಿರುವ ಕಾರಣ ನಿರುದ್ಯೋಗ ಸಮಸ್ಯೆಯಿಂದ ಬಳಲಿದ್ದರೆಂದು ತಿಳಿದುಬಂದಿದೆ. ಅಲ್ಲದೆ ಅವರು ವಿವಿಧ ಸಂಘ ಸಂಸ್ಥೆಗಳಿಂಡ ಸುಮಾರು 3 ಲಕ್ಷ ರೂ ವರೆಗೆ ಸಾಲ ಪಡೆದಿದ್ದರೆನ್ನಲಾಗಿದ್ದು ಕಳೆದ ಎರಡು ದಿನಗಳಿಂದ ಮನೆಗೆ ತೆರಳದೆ ಸೋದರನ ಮನೆಯಲ್ಲೇ ಇದ್ದರು.

ಕಲೆದ ಒಂದು ವರ್ಷದಿಂದ ಸಹಕಾರ ಸಾರಿಗೆ ಸಂಪೂರ್ಣ ಸ್ಥಗಿತವಾಗಿದೆ. ಮಲೆನಾಡಿನ ಜನರ ಜೀವನಾಡಿಯಾಗಿದ್ದ ಸಾರಿಗೆ ಸಂಸ್ಥೆ ಏಷ್ಯಾ ಖಂಡದಲ್ಲೆಲ್ಲಾ ಹೆಸರುವಾಸಿಯಾಗಿತ್ತು. ಆದರೆ ಸರ್ಕಾರದ ಕಾನೂನು, ವಿಮೆ ಸಮಸ್ಯೆ, ಕೋವಿಡ್ ಲಾಕ್ ಡೌನ್ ಸೇರಿ ಹಲವಾರು ಸಮಸ್ಯೆಯಿಂದಾಗಿ ನಷ್ಟಕ್ಕೆ ಗುರಿಯಾಗಿ ಬೀಗ ಹಾಕಲ್ಪಟ್ಟಿದೆ.ಸರ್ಕಾರದ ನೆರವಿಗಾಗಿ ಬೇಡಿಕೆ ಇಟ್ಟಿದ್ದರೂ ಇದುವರೆಗೆ ಸರ್ಕಾರ ಮಾತ್ರ ಇತ್ತ ಗಮನ ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!