ಅಪರಾಧಿಗೆ ಬರೊಬ್ಬರಿ 1,310 ವರ್ಷಗಳ ಕಠಿಣ ಜೈಲು ಶಿಕ್ಷೆ
ಸ್ಯಾನ್‍ಸಲ್ವದೋರ್ ಮಾ.16 : 33 ಕೊಲೆಗಳು, ಒಂಬತ್ತು ಕೊಲೆಗಳ ಸಂಚು ಪ್ರಕರಣಕ್ಕೆ ಸಂಬಂಧಿಸಿ ಎಲ್ ಸಾಲ್ವಡಾರ್‌ನ ಕುಖ್ಯಾತ ಗ್ಯಾಂಗ್ ಸದಸ್ಯನಿಗೆ 1,310 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ವಿಲ್ಮರ್ ಸೆಗೋವಿಯಾ ಶಿಕ್ಷೆಗೊಳಗಾದ ಆರೋಪಿ. ಈತನ ಮೇಲಿರುವ ಕೊಲೆ, ಕೊಲೆ ಸಂಚು ಹಾಗೂ ಇತರ ಅಪರಾಧಗಳ ಕೃತ್ಯದ ಜೊತೆಗೆ ಈತ ಎಲ್ ಸಾಲ್ವಡಾರ್‌ನಲ್ಲಿ ಕಾರ್ಯಾಚರಿಸುತ್ತಿರುವ ಕುಖ್ಯಾತ ಮಾರಾ ಸಾಲ್ವತ್ರುಚಾ ಅಕಾ MS-13 ಗ್ಯಾಂಗ್‌ನ ಷುಲ್ಟನ್ ಸೆಲ್‌ನ ಸದಸ್ಯ ಎಂದು ಕೂಡ ಆರೋಪಿಸಲಾಗಿದೆ.
ಅಟಾರ್ನಿ ಜನರಲ್ ಈ ಕುರಿತ ಪ್ರತಿಕ್ರಿಯೆ ವೇಳೆ ಸಾಲ್ವಡಾರ್ ಜನರಿಗೆ ತುಂಬಾ ನೋವು ಮತ್ತು ಕಣ್ಣೀರನ್ನು ಉಂಟುಮಾಡಿದ ಗ್ಯಾಂಗ್ ಸದಸ್ಯರನ್ನು ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ.