ಉತ್ತರಾಖಂಡ: ಹಿಮನದಿ ಸ್ಫೋಟ: ಏರುತ್ತಿರುವ ಸಾವಿನ ಸಂಖ್ಯೆ
ನವದೆಹಲಿ: ಹಿಮನದಿ ಸ್ಫೋಟದಿಂದ ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ ಏರುತ್ತಲೇ ಇದೆ. ದುರಂತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 32 ಕ್ಕೆ ಏರಿಕೆಯಾಗಿದ್ದು, 197 ಮಂದಿ ನಾಪತ್ತೆಯಾಗಿದ್ದಾರೆ. ರೈನಿ ಗ್ರಾಮದಲ್ಲಿ ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿದ್ದ ಐವರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ತಪೋವನ ವಿದ್ಯುತ್ ಯೋಜನೆಯ ಸ್ಥಳದಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಟನೆಲ್‌ನೊಳಗೆ ಸಿಲುಕಿಕೊಂಡಿದ್ದು, 2 ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇನ್ನು ದುರಂತ ನಡೆದ ಸ್ಥಳದಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಶೊಧಕಾರ್ಯ ಮುಂದುವರೆದಿದ್ದು, ಸುಮಾರು 600 ಮಂದಿ ಭಾರತೀಯ ಸೇನಾ ಯೋಧರು, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಚಮೋಲಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಮುಮದುವರೆಸಿದೆ.
ಅಲಕಾನಂದ ಮತ್ತು ದೌಲಿಗಂಗದಲ್ಲಿ ನಡೆದ ಈ ದುರಂತದಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೆಳಲಾಗುತ್ತಿದೆ. ಅಲ್ಲದೆ ಪ್ರವಾಹದಿಂದ ಹಲವಾರು ಮನೆಗಳು ಕೂಡ ಕೊಚ್ಚಿಹೋಗಿದೆ ಎಂದು ತಿಳಿದು ಬಂದಿದೆ.