ಅರ್ಧದಷ್ಟು ಭಾರತೀಯ-ಅಮೆರಿಕನ್ನರಿಂದ ಮೋದಿ ಆಡಳಿತಕ್ಕೆ ಜೈ, ರೈತರ ಮೇಲೆ ಬಲ ಪ್ರಯೋಗಕ್ಕೆ ತೀವ್ರ ವಿರೋಧ: ಸಮೀಕ್ಷೆ

ವಾಷಿಂಗ್ಟನ್: ಅಮೆರಿಕದ ಮೇಲೆ ಪರಿಣಾಮ ಬೀರುವ ವಿಷಯಗಳಿಗೆ ಸಂಬಂಧಿಸಿದಂತೆ ಅರ್ಧದಷ್ಟು ಭಾರತೀಯ ಮೂಲದ ಅಮೆರಿಕನ್ನರು ಕೇಂದ್ರ ಸರ್ಕಾರದ ನೀತಿಗಳನ್ನು ಒಪ್ಪಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಲಸೆಗಾರರ ಬಗ್ಗೆ ಹೆಚ್ಚು ಉದಾರತೆಯನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಭಾರತೀಯ ಮೂಲದವರ ಸಂಖ್ಯೆ ಅಮೆರಿಕ ಜನಸಂಖ್ಯೆಯ ಶೇಕಡಾ 1 ಕ್ಕಿಂತ ಸ್ವಲ್ಪ ಹೆಚ್ಚು ಮತ್ತು ನೋಂದಾಯಿತ ಮತದಾರರಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಇದ್ದಾರೆ.

ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್, ಜಾನ್ಸ್ ಹಾಪ್ಕಿನ್ಸ್-ಎಸ್ಎಐಎಸ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ “ಭಾರತೀಯ ಅಮೆರಿಕನ್ನರು ಭಾರತವನ್ನು ಹೇಗೆ ನೋಡುತ್ತಾರೆ? ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು, ಭಾರತ-ಅಮೆರಿಕ ನೀತಿಯ ದೃಷ್ಟಿಕೋನಗಳು ಯುನೈಟೆಡ್ ಸ್ಟೇಟ್ಸ್ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಹೆಚ್ಚು ಉದಾರವಾದ ಮತ್ತು ಭಾರತದ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಹೆಚ್ಚು ಸಂಪ್ರದಾಯವಾದಿಯಾಗಿವೆ ಎಂದು ಹೇಳಿದೆ.

ಎರಡು ವಿಷಯಗಳಿಗೆ ಭಾರತೀಯ ಅಮೆರಿಕನ್ನರು ಹೆಚ್ಚು ವಿರೋಧ ವ್ಯಕ್ತಪಡಿಸಿದ್ದು, ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಬಲ ಪ್ರಯೋಗಿಸಿದ್ದಕ್ಕೆ ಶೇ. 65 ರಷ್ಟು ಮತ್ತು ಮಾಧ್ಯಮಗಳ ಮೇಲೆ ಸರ್ಕಾರದ ದಬ್ಬಾಳಿಕೆಗೆ ಶೇ. 69 ರಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ಭಾರತೀಯ ಜನತಾ ಪಕ್ಷ(ಬಿಜೆಪಿ) ಭಾರತೀಯ-ಅಮೆರಿಕನ್ನರಲ್ಲಿ ಅತ್ಯಂತ ಜನಪ್ರಿಯ ರಾಜಕೀಯ ಪಕ್ಷವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಸೆಪ್ಟೆಂಬರ್ 1 ಮತ್ತು ಸೆಪ್ಟೆಂಬರ್ 20, 2020ರ ನಡುವೆ ನಡೆಸಿದ ಈ ಆನ್ ಲೈನ್ ಸಮೀಕ್ಷೆಯಲ್ಲಿ 1,200 ಭಾರತೀಯ ಅಮೆರಿಕನ್ ವಯಸ್ಕರು ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!