ಮಣಿಪಾಲ: ಹೊಸಬೆಳಕು ಅನಾಥಾಶ್ರಮದ ನೂತನ ಸಂಭಾಗಣದ ಉದ್ಘಾಟನೆ
ಮಣಿಪಾಲ(ಉಡುಪಿ ಟೈಮ್ಸ್ ವರದಿ) ಇಲ್ಲಿನ ಸರಳೆಬೆಟ್ಟುವಿನಲ್ಲಿ ಇರುವ ಹೊಸಬೆಳಕು ಅನಾಥಾಶ್ರಮದ ನೂತನ ಸಂಭಾಗಣದ ಉದ್ಘಾಟನೆ ನಿನ್ನೆ(ಫೆ 07) ರಂದು ನಡೆಯಿತು. ಸಂಭಾಗಣದ ಉದ್ಘಾಟನೆಯನ್ನು ಅರ್ಜುನ ಭಂಡಾರಕರ್, ತ್ರಿವೇಣಿ ಶೆಟ್ಟಿ ಯವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ನಗರ ಸಭಾ ಸದಸ್ಯರಾದ ವಿಜಯಲಕ್ಷ್ಮೀ ಅವರು ವಹಿಸಿದ್ದರು. ಇದೆ ಸಂದರ್ಭದಲ್ಲಿ ಭಾರತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷ್ಣಪ್ಪ ಅವರನ್ನು ಗುರುತಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ತಾರನಾಥ ಮೇಸ್ತ ಹಾಗೂ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ತನುಲಾ ತರುಣ್,ಪ್ರಕೃತಿ ಪ್ರೇಮಿ ವಿನಯ್ ಕುಮಾರ್ ಸಾಸ್ತಾನ, ಹೊಸಬೆಳಕು ಸಂಸ್ಥೆಯ ಪೋಷಕರಾದ ತರುಣ್ ಫಾಯ್ದೆ, ಲತಾ ಭಟ್ ಹಾಗೂ ಗಣ್ಯರು ಉಪಸ್ಥಿತರಿದ್ದರು. ಮಂಜುನಾಥ ಬೈಲೂರು ಸ್ವಾಗತಿಸಿ, ಗೌರೀಶ ಕಾರ್ಯಕ್ರಮವನ್ನು ನಿರೂಪಿಸಿದರು.