ಉಡುಪಿ: ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಕುಟುಂಬ

ಉಡುಪಿ: ಮೂಡು ಸಗ್ರಿಯಲ್ಲಿ 16 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಇದ್ದ ಮನೆಗೆ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು. ವಾರ್ಡಿನ ಆಶಾ ಸುಭಾಷ್ ನಾಯ್ಕ ನೊಳೆ ಮಜಲು ಇವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು.

ಈ ಕಾರ್ಯಕ್ರಮವನ್ನು ಉಡುಪಿ ಕನ್ನರ್ಪಾಡಿ ನಿವಾಸಿ ಚೇತನ್ ಕುಮಾರ್ ಇವರ ಮಗು ಸಮನ್ವಿ ಚೇತನ್ ರವರು ಉದ್ಘಾಟಿಸಿದ್ದು, ಈ ಮೂಲಕ ಅವರ ದ್ವಿತೀಯ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. 

ಈ ವೇಳೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಅವರು ಮಾತನಾಡಿ. ತನ್ನ ಮಗುವಿನ ಹುಟ್ಟುಹಬ್ಬದ ಆಚರಣೆ ಸಲುವಾಗಿ ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದ ಚೇತನ್ ಕುಮಾರ್ ದಂಪತಿ  ಸಮಾಜಕ್ಕೆ ಆದರ್ಶವಾದ ಸಂದೇಶ ನೀಡುವ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂದರು.

ಇದೇ ವೇಳೆ 2022 ರ ಒಳಗೆ ಉಡುಪಿ ನಗರ ನೂರು ಶೇಕಡಾ ಮನೆ ಮನೆಗೆ ವಿದ್ಯುತ್ ಸಂಪರ್ಕ ಹೊಂದಿದ ರಾಷ್ಟ್ರದ ಮೊದಲ ನಗರವಾಗಿ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭ ನಗರಸಭೆ ಸದಸ್ಯೆ ಭಾರತಿ ಪ್ರಶಾಂತ್, ನಗರಸಭಾ ಸದಸ್ಯೆ ಅರುಣ ಎಸ್ ಪೂಜಾರಿ. ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಸುಮಾ ನಾಯ್ಕ, ಆಸರೆ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸತೀಶ್ ಕುಲಾಲ್, ವಿದ್ಯಾ ಶಾಂಸುಂದರ್, ಸ್ಥಳೀಯರಾದ ಮಾಧವ ನಾಯ್ಕ, ಸುಂದರ ನಾಯ್ಕ, ಸದಾನಂದ ನಾಯಕ್, ಪ್ರಶಾಂತ್ ಚಕ್ರತೀರ್ಥ, ಸುಮಾ ನಾಯ್ಕ, ಶರಣ ಶೆಟ್ಟಿ ಕನ್ನರ್ಪಾಡಿ ನವ್ಯ ಶೆಟ್ಟಿ, ಗೌತಮ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!