ಶ್ರೀಅಘೋರೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಸ್ವಾಗತ ಗೋಪುರ ಉದ್ಘಾಟನೆ
ಉಡುಪಿ (ಉಡುಪಿ ಟೈಮ್ಸ್ ವರದಿ):ಶ್ರೀ ಅಘೋರೇಶ್ವರ ದೇವಸ್ಥಾನದ ಅಷ್ಟಬಂಧ ಪುನರ್ ಪ್ರತಿಷ್ಟೆ ಮತ್ತು ಬ್ರಹ್ಮಕಲಶೋತ್ಸವ ದ ಪ್ರಯುಕ್ತ ಸ್ವಾಗತ ಗೋಪುರದ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಯ ಗೌರವಾಧ್ಯಕ್ಷರಾದ ಅಪ್ಪಣ್ಣ ಹೆಗ್ಡೆಯವರು ನೇರವೇರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಮೇಶ್ ನಾಯರಿ, ಖಜಾಂಚಿ ಪ್ರಕಾಶ್ ಮಧ್ಯಸ್ಥ, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರ ಶೇಖರ ಕಾರಂತ, ಕಾರ್ಯದರ್ಶಿ ಶ್ಯಾಮ ಸುಂದರ್ ನಾಯರಿ, ಪ್ರಧಾನ ಅರ್ಚಕ ಬಾಲಕೃಷ್ಣ ನಕ್ಷತ್ರಿ, ಖಜಾಂಚಿ ಪ್ರಭಾಕರ್ ಮಧ್ಯಸ್ಥ, ಸದಸ್ಯರಾದ ನಿತ್ಯಾನಂದ ನಾಯರಿ, ಮಂಜುನಾಥ್ ನಾಯರಿ ಹಿರಿಯರಾದ ರಾಮಚಂದ್ರ ನಾಯರಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋಟತಟ್ಟು ವಲಯ ಸದಸ್ಯರು ಉಪಸ್ಠಿತರಿದ್ದರು.