ಗಂಗೊಳ್ಳಿ: ಆರ್ಥಿಕ ಮುಗ್ಗಟ್ಟು ಯುವಕ ಆತ್ಮಹತ್ಯೆ

ಗಂಗೊಳ್ಳಿ (ಉಡುಪಿ ಟೈಮ್ಸ್ ವರದಿ): ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಸಚಿನ್ (24) ಆತ್ಮಹತ್ಯೆ ಮಾಡಿಕೊಂಡಿರುವವರು. ಇವರು,
ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ವರ್ಷ ಏಪ್ರಿಲ್ ನಲ್ಲಿ ಊರಿಗೆ ಬಂದು ” ವರ್ಕ್ ಫ್ರಮ್ ಹೋಮ್” ಕೆಲಸ ಮಾಡಿಕೊಂಡಿದ್ದರು.


ಸಂಬಳ ಸಾಕಾಗದೇ ಇತ್ತೀಚೆಗೆ ತುಂಬಾ ಬೇಸರದಲ್ಲಿ ಇದ್ದ ಇವರು, ಕೆಲವು ಬ್ಯಾಂಕ್‌ಗಳಲ್ಲಿ ಹಾಗೂ ಕೆಲವರಲ್ಲಿ ಕೈ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲಾಗದೇ ಮಾನಸಿಕವಾಗಿ ನೊಂದುಕೊಂಡಿದ್ದರು. ಸಾಲದ ಸಮಸ್ಯೆಯಿಂದ ಬೇಸರಗೊಂಡು ” ನನ್ನ ಸಾವಿಗೆ ನಾನೇ ಕಾರಣ ” ಎಂದು ಡೆತ್ ನೋಟ್ ಬರೆದಿಟ್ಟು ಫೆ.6 ರಂದು ಮನೆಯ ಸಮೀಪ ಗಣಪತಿ ಮೇಸ್ತ ಎಂಬುವವರ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!