ಗಂಗೊಳ್ಳಿ : ಗಾಂಜಾ ಸೇವಿಸುತ್ತಿದ್ದ ಯುವಕನ ಬಂಧನ
ಗಂಗೊಳ್ಳಿ: ಗಾಂಜಾ ಸೇವಿಸುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗಂಗೊಳ್ಳಿಯ ಮುಳ್ಳಿಕಟ್ಟೆ ಬಳಿ ನಡೆದಿದೆ. ನಿಶಾನ್ (20) ಗಾಂಜಾ ಸೇವಿಸುತ್ತಿದ್ದ ಯುವಕ.
ಜ.31 ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ಪಾಳಿಯಲಿದ್ದ ವೇಳೆ ಮುಳ್ಳಿಕಟ್ಟೆ ಬಳಿ ಯುವಕನೋರ್ವ ಗಾಂಜಾ ಸೇವಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅವರು ಕಾರ್ಯಾಚರಣೆ ನಡೆಸಿದಾಗ ಯುವಕ ಅಮಲಿನಲ್ಲಿ ಇರುವುದು ಕಂಡು ಬಂದಿದೆ. ಇನ್ನು ಯುವಕ ಮಾದಕ ಪದಾರ್ಥ ಸೇವಿಸಿರುವ ಬಗ್ಗೆ ಖಚಿತ ಪಡಿಸಲು ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಯುವಕ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.