ಡಿವೈಡರ್ ಗೆ ಲಾರಿ ಢಿಕ್ಕಿ:ಪ್ರಾಣಾಪಾಯದಿಂದ ಚಾಲಕ ಪಾರು
ಕಾಪು,(ಉಡುಪಿ ಟೈಮ್ಸ್ ವರದಿ): ಡಿವೈಡರ್ ಗೆ ಢಿಕ್ಕಿ ಹೊಡೆದ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯೊಂದು ಉರುಳಿಬಿದ್ದ ಘಟನೆ ಕಾಪು ಸಮೀಪದ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಫೆ.4) ಬೆಳಗಿನ ಜಾವ ನಡೆದಿದೆ.
ಶಿಕಾರಿಪುರದಿಂದ ಮಂಗಳೂರಿಗೆ ಖಾಲಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗುತ್ತಿದ್ದ ವೇಳೆ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವಿನ ಡಿವೈಡರ್ ಗೆ ಢಿಕ್ಕಿ ಹೊಡೆದು ಹೆದ್ದಾರಿ ಮಧ್ಯೆ ಉರುಳಿ ಬಿದ್ದಿದೆ. ಅಪಘಾತದಿಂದ ಗಾಯಗೊಂಡಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.