ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗ ಲೋಕಾರ್ಪಣೆ
ಶಿಮ್ಲಾ: ಹಿಮಾಚಲ ಪ್ರದೇಶದ ಮನಾಲಿ ಹಾಗು ಲೇಹ್ ನ್ನು ಸಂಪರ್ಕಿಸುವ ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್,ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಭಾಗವಹಿಸಿದ್ದರು.
ಮನಾಲಿಯನ್ನು ಲೇಹ್ ಗೆ ಸಂಪರ್ಕಿಸುವ 9.02 ಕಿ ಮೀ ಉದ್ದದ ಹೆದ್ದಾರಿ ಸುರಂಗವಾಗಿದ್ದು ಇದು ಮನಾಲಿ ಮತ್ತು ಲೇಹ್ ನ್ನ ದೂರವನ್ನು 46 ಕಿ ಮೀ ನಷ್ಟು ಹಾಗು ಪ್ರಯಾಣದ ಅವಧಿಯನ್ನು ಸುಮಾರು 4 ರಿಂದ 5 ಗಂಟೆಗಳವರೆಗೆ ಕಡಿತ ಗೊಳಿಸಲಿದೆ ಅಲ್ಲದೆ ಈ ಮೊದಲು ಈ ದಾರಿಯಲ್ಲಿ ಸುಮಾರು 6 ತಿಂಗಳು ಹಿಮಪಾತವಾಗುತ್ತಿದ್ದು ಆ ಸಂದರ್ಭದಲ್ಲಿ ಪ್ರಯಾಣಕ್ಕೆ ನಿರ್ಬಂಧ ಹೇರಲಾಗುತ್ತಿತ್ತು. ಈಗ ಸುರಂಗ ಮಾರ್ಗ ನಿರ್ಮಾಣವಾಗಿರುವುದರಿಂದ ವರ್ಷ ಪೂರ್ತಿ ಮನಾಲಿ ಸ್ಪಿತಿ ಕಣಿವೆಗೆ ಸಂಚರಿಸಬಹುದಾಗಿದೆ.
ಇದು ಸಮುದ್ರ ಮಟ್ಟದಿಂದ (ಎಂಎಸಎಲ್) 3 ,೦೦೦ ಮೀಟರ್ (10,000) ಅಡಿ ಎತ್ತರವಾಗಿದೆ. ಹಾಗು ಸುಮಾರು 10 ವರ್ಷಗಳಲ್ಲಿ ಪೂರ್ಣವಾಗಿದೆ.