ಕಾಪು: ಅಂಗಡಿ ಮಾಲೀಕನಿಂದ 6 ಲಕ್ಷ ದೋಚಿದ ಆರೋಪಿ ಸೆರೆ

ಕಾಪು ಫೆ.23 : ಇಲ್ಲಿನ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರಿಂದ 6 ಲಕ್ಷ ರೂ. ದೋಚಿದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಕಾಪುವಿನ ಮಹಾಲಸಾ ಸ್ಟೋರ್ ಮಾಲಿಕರಾದ ರಾಘವೇಂದ್ರ ಕಿಣಿ ಅವರು ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಗ್ರಾಹಕನ ಸೋಗಿನಲ್ಲಿ ಬಂದು ಮಾಲಕರಿಂದ 6 ಲಕ್ಷ ಹಣ ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ರಾಘವೇಂದ್ರ ಕಿಣಿ ಅವರು ದೂರು ನೀಡಿದ್ದರು. ಕೂಡಲೇ ಕಾರ್ಯಚರಣೆಗಿಳಿದ ಕಾಪುವಿನ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ಇಂದು ಬೆಳಿಗ್ಗೆ ಅಂಗಡಿಗೆ ಕರೆತಂದು ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!