ಮಣಿಪಾಲ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ-ಮ್ಯಾನೇಜರ್ ಸಹಿತ ಇಬ್ಬರ ವಿರುದ್ಧ ದೂರು ದಾಖಲು

ಮಣಿಪಾಲ ಫೆ.23 (ಉಡುಪಿ ಟೈಮ್ಸ್ ವರದಿ): ಹೆರ್ಗಾ ಗ್ರಾಮದ ಶ್ರೀ ಸಾಯಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ನಿನ್ನೆ ಮಣಿಪಾಲದ ಹೆರ್ಗಾ ಗ್ರಾಮದ ಶ್ರೀ ಸಾಯಿ ಲಾಡ್ಜ್ ಗೆ ದಾಳಿ ಮಾಡಿದಾಗ ರೂಮ್ ನಂಬರ್ 201 ರಲ್ಲಿ ಒಂದು ಹೆಂಗಸು ಮತ್ತು 202 ರಲ್ಲಿ ಒಂದು ಹೆಂಗಸು ಮತ್ತು ಒಂದು ಗಂಡಸು ಇದ್ದೂರು ಕಂಡು ಬಂದಿದೆ. ಈ ವೇಳೆ ಪೊಲೀಸರು ವೇಶ್ಯಾವಟಿಕೆಯಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಈ ಹೋಟೆಲ್ (ಲಾಡ್ಜ್ )ನ ಮೇನೇಜರ್ ಸಂಪತ್ ಕುಮಾರ್ ಮತ್ತು ಕೆಲಸಕ್ಕೆ ಇರುವ ಸಂತೋಷ್ ಮತ್ತು ದಿನೇಶ್ ಎಂಬವರು ಹೆಂಗಸರನ್ನು ಅನೈತಿಕ ವೇಶ್ಯವಾಟಿಕೆ ಚಟುವಟಿಕೆ ಮಾಡುವಂತೆ ರೂಮಿನಲ್ಲಿ ಇರಿಸಿದ್ದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!