ಉಡುಪಿ: ಫೆ.12 ರಂದು ಅತಿರುದ್ರ ಮಹಾಯಾಗದ ಅಂಗವಾಗಿ ‘ಶಿವೋತ್ಸವ- ಬಾಲಶಿವ ವೇಷಭೂಷಣ ಸ್ಪರ್ಧೆ

ಉಡುಪಿ ಫೆ.11 (ಉಡುಪಿ ಟೈಮ್ಸ್ ವರದಿ) : `ಅತಿರುದ್ರ ಮಹಾಯಾಗ’ದ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ “ಶಿವೋತ್ಸವ ಬಾಲಶಿವ” ವೇಷಭೂಷಣ ಸ್ಪರ್ಧೆಯನ್ನು ಅಂಗನವಾಡಿ ಮತ್ತು ಪ್ರಾಥಮಿಕ ವಿದ್ಯಾರ್ಥಿಗಳಿಗೆ ಫೆ.12 ರಂದು ಬೆಳಿಗ್ಗೆ 10 ರಿಂದ ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದ್ದು, ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದೆ. 1 ರಿಂದ 4 ವರ್ಷದ ಮಕ್ಕಳಿಗೆ “ಸಬ್ ಜೂನಿಯರ್” ವಿಭಾಗ, 4 ರಿಂದ 8 ವರ್ಷದ ಮಕ್ಕಳಿಗೆ “ಜೂನಿಯರ್” ವಿಭಾಗ, 8 ರಿಂದ 12 ವರ್ಷದ ಮಕ್ಕಳಿಗೆ “ಸೀನಿಯರ್” ವಿಭಾಗದಲ್ಲಿ ನಡೆಸಲಾಗಿತ್ತದೆ. ಸಬ್ ಜೂನಿಯರ್ ವಿಭಾಗಕ್ಕೆ 30 ಸೆಕೆಂಡುಗಳ ಕಾಲಾವಕಾಶ ಹಾಗೂ ಸೀನಿಯರ್ ಮತ್ತು ಜೂನಿಯರ್ ವಿಭಾಗಕ್ಕೆ 1 ನಿಮಿಷದ ಕಾಲಾವಕಾಶವನ್ನು ನೀಡಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪುಟಾಣಿಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಫಲಕವನ್ನು ನೀಡಲಾಗುತ್ತದೆ. ಇನ್ನು ಮೂರು ವಿಭಾಗಗಳಲ್ಲಿಯೂ ತಲಾ ಹತ್ತು ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಪುಟಾಣಿಗಳ ವಯಸ್ಸಿನ ಪುರಾವೆ ತರತಕ್ಕದ್ದು, ಬಾಲಶಿವನ ವೇಷಧಾರಿಗಳಾಗಿರಬೇಕು, ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು (ನೀರು, ಬೆಂಕಿ ಹಾಗೂ ಸುಡುಮದ್ದು ಬಳಸುವಂತಿಲ್ಲ), ಸ್ಪರ್ಧೆಯ ಫಲಿತಾಂಶಗಳನ್ನು ವೇಷ ಭೂಷಣ, ಅಭಿನಯ ಹಾಗೂ ಸೃಜನಶೀಲತೆ ಪರಿಗಣಿಸಿ ಸ್ಥಳದಲ್ಲೇ ಅಂದೇ ಬಹುಮಾನಗಳನ್ನು ನೀಡಲಾಗುವುದು. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಹಾಗೂ ಬೆಳಿಗ್ಗೆ 9 ಗಂಟೆಯಿಂದ ನೋಂದಣಿ ಪ್ರಾರಂಭವಾಗಲಿದ್ದು, 10 ಗಂಟೆಯಿಂದ ಸ್ಪರ್ಧೆ ನಡೆಯಲಿದೆ. ನೋಂದಾವಣೆಗಾಗಿ QR ಕೋಡ್ ನ್ನು Scan ಮಾಡಿ ಅಥವಾ 7899476670 ನಂಬರ್ ಗೆ ಕರೆಮಾಡಿ ನೋಂದಣಿ ಮಾಡಿಕೊಳ್ಳಬಹುದು, ಅಥವಾ https://docs.google.com/forms/d/1E4fFiBjk4ZTa-5_qrw97waLkMfsbKpA00sZa89Pc5F0/edit?ts=63e13796 ಲಿಂಕ್ ಕ್ಲಿಕ್ ಮಾಡಿ ನೋಂದಾವಣೆ ಮಾಡಿಕೊಳ್ಳುವಂತೆ ಸೋಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!