ಅದಾನಿ ಸಮೂಹದ ಷೇರುಗಳು ಇಂದು ಮತ್ತೆ ಕುಸಿತ-ಹೂಡಿಕೆದಾರರಲ್ಲಿ ಆತಂಕ

ಹೊಸದಿಲ್ಲಿ ಫೆ.9 : ಅದಾನಿ ಸಮೂಹದ ಷೇರುಗಳು ಇಂದು ಮತ್ತೆ ಕುಸಿತ ಕಂಡಿದ್ದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.

ಸೆಕ್ಯೂರಿಟಿಗಳ ಸೂಚ್ಯಂಕ ಪೂರೈಕೆದಾರ ಎಂಎಸ್‍ಸಿಐ ತಾನು ಉದ್ಯಮದ ಸೆಕ್ಯೂರಿಟಿಗಳ ಫ್ರೀ-ಫ್ಲೋಟ್‍ನ್ನು ಪರಿಶೀಲನೆ ನಡೆಸುವುದಾಗಿ ಹೇಳಿದ ನಂತರ ಗ್ರೂಪ್ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿವೆ. ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ದಾಖಲಿಸಿದ್ದ ಅದಾನಿ ಸಮೂಹದ ಷೇರುಗಳು ಇಂದು ಮತ್ತೆ ಕುಸಿತ ಕಂಡಿದೆ.

ಅದಾನಿ ಗ್ರೂಪ್‍ಗೆ ಸೇರಿದ 10 ಷೇರುಗಳಲ್ಲಿ ಪ್ರಮುಖ ಘಟಕವಾದ ಅದಾನಿ ಎಂಟರ್ ಪ್ರೈಸಸ್ ಎನ್.ಎಸ್.ಇ.ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಶೇ. 11.19ರಷ್ಟು ಕುಸಿತ ಕಂಡಿದೆ. ಒಂದು ಹಂತದಲ್ಲಿ ಇದು ಶೇ. 15ರ ಲೋವರ್ ಸಕ್ರ್ಯೂಟ್ ನಲ್ಲಿ ಲಾಕ್ ಕೂಡ ಆಗಿತ್ತು. ಇತರ ಆರು ಷೇರುಗಳಾದ ಅದಾನಿ ಪೋಟ್ರ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಶೇ. 2.94, ಎಸಿಸಿ ಷೇರು ಶೇ. 3.03ರಷ್ಟು ಕುಸಿತ ಕಂಡರೆ ಅಂಬುಜಾ ಸಿಮೆಂಟ್ಸ್ ಶೇ. 6.95ರಷ್ಟು ಕುಸಿತ ಕಂಡಿದೆ. ಅದಾನಿ ಗ್ರೀನ್, ಅದಾನಿ ಪವರ್, ಅದಾನಿ ಟ್ರಾನ್ಸ್‍ಮಿಷನ್, ಅದಾನಿ ಟೋಟಲ್ ಗ್ಯಾಸ್, ಎನ್‍ಡಿಟಿವಿ (4.98%) ಶೇ. 5ರ ಲೋವರ್ ಸಕ್ರ್ಯೂಟ್‍ನಲ್ಲಿ ಲಾಕ್ ಆಗಿದ್ದವು. ಆದರೆ ಮತ್ತೊಂದೆಡೆ ಅದಾನಿ ವಿಲ್ಮಾರ್ ಮಾತ್ರ ಶೇ. 4.99ರಷ್ಟು ಗಳಿಕೆ ಕಂಡು ಸಮೂಹದ ಕಂಪನಿಗಳಲ್ಲೇ ಹೆಚ್ಚಿನ ವಹಿವಾಟು ನಡೆಸಿದ ಷೇರು ಎನಿಸಿಕೊಂಡಿದೆ.

ಎಂಎಸ್‍ಸಿಐ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುವ ‘ಮಾರ್ಗನ್ ಸ್ಟ್ಯಾನ್ಲಿ ಕ್ಯಾಪಿಟಲ್ ಇಂಟರ್‍ನ್ಯಾಷನಲ್’ ನೀಡಿದ ಹೇಳಿಕೆಯೇ ಇಂದಿನ ಕುಸಿತಕ್ಕೆ ಕಾರಣವಾಗಿದ್ದು, ಕೆಲವು ಹೂಡಿಕೆದಾರರ ಗುಣಲಕ್ಷಣಗಳು ಸಾಕಷ್ಟು ಅನಿಶ್ಚಿತತೆಯಿಂದ ಕೂಡಿದೆ. ಫ್ರೀ ಫ್ಲೋಟ್ ಪರಿಶೀಲನೆಯನ್ನು ನಡೆಸುವುದಾಗಿ ಸಂಸ್ಥೆ ಹೇಳಿತ್ತು. ಅದಾನಿ ಷೇರುಗಳಲ್ಲಿ ಅದಾನಿ ವಿಲ್ಮಾರ್ ಮತ್ತು ಎನ್‍ಡಿಟಿ ಷೇರುಗಳು ಎಂ.ಎಸ್.ಸಿ.ಐ ಇಂಡೆಕ್ಸ್‍ನ ಭಾಗವಾಗಿಲ್ಲ. ಹೀಗಾಗಿ ಇವೆರಡು ಷೇರುಗಳ ಮೇಲೆ ಇದರ ಪರಿಣಾಮ ಹೆಚ್ಚಾಗಿ ತಟ್ಟಿಲ್ಲ.

“ಅದಾನಿ ಗ್ರೂಪ್‍ಗೆ ಸಂಬಂಧಿಸಿದಂತೆ ನಮ್ಮ 27 ಜನವರಿ 2023 ಪ್ರಕಟಣೆಯನ್ನು ಅನುಸರಿಸಿ, ಗ್ಲೋಬಲ್ ಇನ್ವೆಸ್ಟಬಲ್ ಮಾರ್ಕೆಟ್ ಇಂಡೆಕ್ಸ್‍ಗಾಗಿ ಅದಾನಿ ಗ್ರೂಪ್‍ಗೆ ಸಂಬಂಧಿಸಿದ ನಿರ್ದಿಷ್ಟ ಸೆಕ್ಯುರಿಟಿಗಳ ಅರ್ಹತೆ ಮತ್ತು ಉಚಿತ ಫ್ಲೋಟ್ ನಿರ್ಣಯದ ಬಗ್ಗೆ ಮಾರುಕಟ್ಟೆ ಭಾಗವಹಿಸುವವರ ವಲಯದಿಂದ ಎಂ.ಎಸ್.ಸಿ.ಐ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ,” ಎಂಬುದಾಗಿ ಎಂ.ಎಸ್.ಸಿ.ಐ ಹೇಳಿದೆ.

ಸೂಚ್ಯಂಕ ಪೂರೈಕೆದಾರ ಸಂಸ್ಥೆಯು, ಸೆಕ್ಯೂರಿಟಿಯ ಫ್ರೀ ಫ್ಲೋಟ್ ಅನ್ನು ಅಂತಾರಾಷ್ಟ್ರೀಯ ಹೂಡಿಕೆದಾರರು ಸಾರ್ವಜನಿಕ ಷೇರು ಮಾರುಕಟ್ಟೆಗಳಲ್ಲಿ ಖರೀದಿಸಲು ಲಭ್ಯವಿರುವ ಷೇರುಗಳ ಪ್ರಮಾಣ ಎಂದು ವ್ಯಾಖ್ಯಾನಿಸುತ್ತದೆ. ಎಂ.ಎಸ್.ಸಿ.ಐ ಯು ತನ್ನ ಅಂದಿನ ರಾತ್ರಿಯ ಸೂಚ್ಯಂಕ ವಿಮರ್ಶೆಯಲ್ಲಿ ಫ್ರೀ ಫ್ಲೋಟ್ ಬದಲಾವಣೆಗಳು ಮತ್ತು ಸಂಬಂಧಿತ ಮಾರುಕಟ್ಟೆ ಬಂಡವಾಳದ ನಿರ್ಣಯಗಳನ್ನು ಕಾರ್ಯಗತಗೊಳಿಸುತ್ತದೆ. ಎಂಎಸ್‍ಸಿಐ ಈ ಬದಲಾವಣೆ ಮಾಡುವ ಮೂಲಕ ತಮ್ಮ ತಂಡದ ಸಂಶೋಧನೆಯನ್ನು ಒಪ್ಪಿಕೊಂಡಂತಾಗಿದೆ ಎಂದು ಹಿಂಡನ್‍ ಬರ್ಗ್ ರಿಸರ್ಚ್‍ನ ನೇಟ್ ಆಂಡರ್ಸನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!