ಉಡುಪಿ:ಹಲವು ಸಂಘಟನೆ ವತಿಯಿಂದ ಉಚಿತ ಅರೋಗ್ಯ ಶಿಬಿರ ಉದ್ಘಾಟನೆ
ಉಡುಪಿ(ಉಡುಪಿ ಟೈಮ್ಸ್ ವರದಿ): ಮೋದಿ ಬಿಗ್ರೇಡ್ ಕರ್ನಾಟಕ ಉಡುಪಿ , ರಾಮಕ್ಷತ್ರಿಯ ಸಂಘ ಉಡುಪಿ , ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟ್ ಉಡುಪಿ ಹಾಗೂ ಶ್ರೀ ಧರ್ಮಸ್ಥಳ ಆಯುರ್ವೇದ ಉದ್ಯಾವರ ಇದರ ಜಂಟಿ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗು ಉಚಿತ ಆಯುರ್ವೇದ್ ಔಷಧಿ ವಿತರಣೆ ಕಾರ್ಯಕ್ರಮ ರಾಮಕ್ಷತ್ರಿಯ ಸಭಾ ಭವನ ಉಪ್ಪೂರುನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಧಾರ್ಮಿಕ ದತ್ತಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಅವರು ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತದ ಪ್ರಧಾನಿ ಮೋದಿ ಅಭಿಮಾನಿಗಳಿಂದ ರಚಿತವಾದ ಹಲವು ಸಂಘಟನೆಯಲ್ಲಿ ಮೋದಿ ಬಿಗ್ರೇಡ್ ಸಮಾಜ ಮುಖಿ ಕಾರ್ಯ ನಿರಂತರವಾಗಿ ಹಮ್ಮಿಕೊಂಡು ದೇಶದ ಜನರ ಸೇವೆ ಮಾಡುತ್ತಿದೆ. ಈ ರೀತಿಯ ಸೇವೆಯಿಂದ ಗ್ರಾಮೀಣ ಪ್ರದೇಶದ ಜನರ ಸಂಘಟನೆ ಬಲಿಷ್ಠ ವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರ ಅನುಮತಿ ಮೇರೆಗೆ ಶ್ರೀ ರಾಮ ಆಂಜೆನೇಯ ದೇವಳ ಅಭಿವೃದ್ಧಿಗೆ 8 ಲಕ್ಷ ರೊಪಾಯಿ ಬಿಡುಗಡೆ ಮಾಡಿದರು. ಈ ವೇಳೆ ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟ್ ವತಿಯಿಂದ ಸಚಿವರನ್ನು ಗೌರವಿಸಲಾಯಿತು.
ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞರಾದ ಡಾ ಅರುಣಾ, ಡಾ ಅರ್ಚನಾ , ಡಾ ಗಣೇಶ, ಮಹಿಳಾ ಹಾಗು ಮಕ್ಕಳ ಪರೀಕ್ಷೆ ನೆಡೆಸಿದರು, ಬಿಪಿ ಪರೀಕ್ಷೆ , ಬಿಂದು ನಾಡಿ ಚಿಕೆತ್ಸೆರಾದ ಹರೀಶ್ ಸಾಮಗ ನಡೆಸಿದರು. ನೂರಾರು ಶಿಬಿರಾಥಿಗಳು ಈ ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ರಘುಪತಿ ಭಟ್, ಜಿಲ್ಲಾ ಸಹಕಾರಿ ಮೀನು ಮಾರಾಟ ಮಂಡಳಿ ಅಧ್ಯಕ್ಷ ಯಶಪಾಲ್ ಸುವರ್ಣ, ಮೋದಿ ಬಿಗ್ರೇಡ್ ಕರ್ನಾಟಕ ರಾಜ್ಯ ಅಧ್ಯಕ್ಷ ಗಣೇಶ ಪ್ರಸಾದ್ , ವೈದಿಕೀಯ ಅಧೀಕ್ಷಕ ಡಾ ಮಮತಾ ನವೀನ್, ಉಪಾಧ್ಯಕ್ಷ ಚಿನ್ಮಯಾ ಮೂರ್ತಿ, ರಾಜ್ಯ್ ಕಾರ್ಯದರ್ಶಿ ನೀತಾ ಪ್ರಭು, ಜಿಲ್ಲಾ ಮಹಿಳಾ ಅಧ್ಯಕ್ಷೆ ವೇದಾವತಿ ಹೆಗಡೆ, ಬಿಜೆಪಿ ಮಹಿಳಾ ಜಿಲ್ಲಾ ಅಧ್ಯಕ್ಷೆ ವೀಣಾ ಶೆಟ್ಟಿ, ರಾಮಕ್ಷತ್ರಿಯ ಸಂಘದ ಜಿಲ್ಲಾ ಅಧ್ಯಕ್ಷ ಕೆ ಟಿ ನಾಯಕ, ರಾಮಕ್ಷತ್ರಿಯ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಕರುಣಾಕರ ಉಪ್ಪೂರು, ಮೋದಿ ಬಿಗ್ರೇಡ್ ಉಡುಪಿ ಜಿಲ್ಲಾ ಅಧ್ಯಕ್ಷ ಸುಭಾಶಿತ್ ಕುಮಾರ್, ಬಾಲಕೃಷ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.