ರೈತರ ಹೆಸರಿನಲ್ಲಿ ರಾಜಕೀಯ ಪುಂಡಾಟ ಮಾಡುವುದು ಸರಿಯಲ್ಲ: ನಳೀನಕುಮಾರ್

ಚಿತ್ರದುರ್ಗ( ಉಡುಪಿ ಟೈಮ್ಸ್ ವರದಿ) : ರೈತರ ಹೆಸರಿನಲ್ಲಿ ರಾಜಕೀಯ ಪುಂಡಾಟ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿದ್ದಾರೆ.
ದೆಹಲಿಯ ಟ್ರಕ್ ರ‍್ಯಾಲಿ ಕುರಿತು ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿರುವ ಅವರು, ದಾಂಧಲೆ ಮಾಡುವುದು ರೈತ ಮತ್ತು ದೇಶಭಕ್ತರು ಮಾಡುವ ಕಾರ್ಯವಲ್ಲ. ಇದು ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳ ಕೃತ್ಯವಾಗಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ಈ ಕುರಿತಾಗಿ ಮಾತು ಮುಂದುವರೆಸಿದ ಅವರು, ಕೆಂಪುಕೋಟೆ ಮೇಲೆ ದಾಳಿ ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ಸರಿಯಲ್ಲ. ಸಂವಿಧಾನಕ್ಕೆ ಗೌರವ ಕೊಡುವ ದಿನದಂದು ಯಾವುದೇ ಬೇಡಿಕೆಯಾದರೂ ಶಾಂತಿಯುತವಾಗಿ ಮಾಡಬೇಕಿತ್ತು. ಇಲ್ಲಿ ರೈತರ ಹೆಸರಿನಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದಾರೆ. ಕೆಲ ರಾಜಕೀಯ ಪಕ್ಷಗಳು ರೈತರ ದಿಕ್ಕು ತಪ್ಪಿಸುತ್ತೀವೆ. ದೇಶದ ರೈತರು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಅಧಿಕಾರ ಇಲ್ಲದಾದ ಬೆಂಕಿ ಹಾಕುವ ಕೆಲಸವನ್ನು ಮಾಡಿ ಅಶಾಂತಿ, ಗಲಭೆ ಸೃಷ್ಟಿಸುತ್ತಿದೆ. ಸಿಎಎ ಜಾರಿ ಸಂದರ್ಭದಲ್ಲೂ ಕಾಂಗ್ರೆಸ್ ನಿಂದ ಗಲಾಟೆಯಾಗಿತ್ತು. ಆಗ ಪಿಸ್ತೂಲ್ ಹಿಡಿದು ತಿರುಗಿದ್ದರು. ನಿನ್ನೆ ತಲವಾರ್ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ವಿಚಾರ, ಸಿದ್ಧಾಂತ, ದೇಶವನ್ನೂ ಮರೆತಂತಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಭಯೋತ್ಪಾದಕ ಕೃತ್ಯಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ವಿರುದ್ಧವಾಗಿ ಚಾಟಿ ಬೀಸಿದ್ದಾರೆ.

ಸಿದ್ಧರಾಮಣ್ಣ ಅವರಿಗೆ ರೈತಪರ ಮಾತಾಡುವ ನೈತಿಕ ಹಕ್ಕಿಲ್ಲ ಎಂದ ಅವರು, ಸಿಎಂ ಆಗಿದ್ದಾಗ ರಾಜ್ಯದಲ್ಲಿ 3 ಸಾವಿರ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮಾಜವಾದದ ಹೆಸರಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಜಾ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶೀಘ್ರ ರಾಜಕೀಯ ಅಂತ್ಯ ಕಾಣಲಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!