ಉಡುಪಿ: “ಪರ್ಯಾಯ ಪಂಚ ಶತಮಾನೋತ್ಸವ” ಸಂಪನ್ನ
ಉಡುಪಿ (ಉಡುಪಿ ಟೈಮ್ಸ್ ವರದಿ) : ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯ ಪಂಚ ಶತಮಾನೋತ್ಸವ”ದ ಸಮಾರೋಪ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿನಡೆಯಿತು
ಕಾರ್ಯಕ್ರಮದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಅಭ್ಯಾಗತರಾಗಿ ಆನೆಗುಡ್ಡೆ ಶ್ರೀವಿನಾಯಕ ದೇವಳದ ಆಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾದ್ಯಾಯ ಮತ್ತು ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ತಮಿಳುನಾಡಿನ ಬಿ.ಜೆ.ಪಿ ಉಪಾಧ್ಯಕ್ಷರಾದ ಅಣ್ಣಾಮಲೈ ವೀಡಿಯೋ ಸಂದೇಶ ನೀಡಿದರು. ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ,ದಿ.ಕೆ.ಕೆ.ಪೈ ಇವರ ಸ್ಮರಣಾರ್ಥ ಅವರ ಮೊಮ್ಮಗ ಅಶ್ವಿನ್, ದಿ.ವಿಜಯನಾಥ ಶೆಣೈ ಇವರ ಸ್ಮರಣಾರ್ಥ ಪುತ್ರಿ ಅನುರೂಪಾ ಶೆಣೈ ಇವರಿಗೆ,ದಿ.ದೇವರಾಜ ಇವರ ಸ್ಮರಣಾರ್ಥ ಅವರ ಪುತ್ರ ರಾಜೇಶ್ ರಾವ್,ದಿ.ಟಿ.ವಿ.ರಾವ್ ಇವರ ಸ್ಮರಣಾರ್ಥ ಅವರ ಪುತ್ರ ಡಾ.ಶ್ರೀನಿವಾಸ ರಾವ್,ಮೂಡಬಿದ್ರೆಯ ದಿ.ಅಮರನಾಥ ಶೆಟ್ಟಿ ಇವರ ಸ್ಮರಣಾರ್ಥ ಪತ್ನಿ ಜಯಶ್ರೀ, ದಿ.ಕೆ.ವಿ.ಬಿಳಿರಾಯ ಇವರ ಸ್ಮರಣಾರ್ಥ ಅವರ ಪುತ್ರ ಸುರೇಶ ಬಿಳಿರಾಯ ಉಡುಪಿ,ಕುಂದಾಪುರದ ಮಾಜಿ ಶಾಸಕರಾದ ಏ.ಜಿ.ಕೊಡ್ಗಿ,ಅಪ್ಪಣ್ಣ ಹೆಗ್ಡೆ,ಉಡುಪಿಯ ಸೋಮಶೇಖರ ಭಟ್,ಗುಜ್ಜಾಡಿ ಪ್ರಭಾಕರ ನಾಯಕ್,ಯು.ಕೆ.ರಾಘವೇಂದ್ರ ರಾವ್,ಪ್ರೊ.ಎಂ.ಎಲ್.ಸಾಮಗ,ಮಲ್ಪೆ ಇವರಿಗೆ ಪರ್ಯಾಯ ಶ್ರೀಪಾದರು ಸನ್ಮಾನಿಸಿದರು.