ಕಾಂಗ್ರೆಸ್ ಕೈ ಕೊಟ್ಟು ಪಕ್ಷಾಂತರ ಗೊಂಡವರು ನಾನು ನುಡಿದಂತೆ ರಾಜಕೀಯ ಸಮಾಧಿಯಾಗಿದ್ದಾರೆ – ಡಿಕೆಶಿ ವ್ಯಂಗ್ಯ
ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರ ಗೊಂಡು ಬಿಜೆಪಿ ಪಾಳಯಕ್ಕೆ ಸೇರಿದ ಕೈ ಮುಖಂಡರಿಗೆ ವಿಧಾನಸಭೆಯಲ್ಲಿ ಪಕ್ಷಕ್ಕೆ ಕೈ ಕೊಟ್ಟ ನೀವೆಲ್ಲ ರಾಜಕೀಯ ಸಮಾಧಿ ಆಗುತ್ತೀರಾ ಎಂದು ಹೇಳಿದ್ದೆ ಈಗ ಖಾತೆ ಹಂಚಿಕೆ ನೋಡಿದಾಗ ಅದು ಸ್ಪಷ್ಟವಾಗುತ್ತಿದೆ ಎಂದು ಕೆ ಪಿ ಸಿ ಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಕುರಿತಂತೆ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿರುವ ಅವರು
ಐಸಿಯು, ಆಕ್ಸಿಜನ್ನಲ್ಲಿ ಸರ್ಕಾರ ನಡೆಯುತ್ತಿದೆ ಎಂದ ಅವರು, ಈಗ ಯಾವ ಯಾವ ಖಾತೆ ಕೊಟ್ಟಿದ್ದಾರೆ ಅಂತಾ ನೋಡಿ. ಗೋಪಾಲಯ್ಯ, ಎಂಟಿಬಿ ನಾಗರಾಜ್, ನಾರಾಯಣಗೌಡ, ರೋಷನ್ ಬೇಗ್ ಕಥೆ ಏನಾಗಿದೆ ನೋಡಿ. ಎಂಟಿಬಿಗೆ ವಸತಿ ಖಾತೆ ಇತ್ತು. ಪಾಪ ಈಗ ಅವನು ಅಲ್ಲಿ ಬಾಟಲ್ ಮಾರಬೇಕಂತೆ. ಅವರೆನೆಲ್ಲ ಬಳಸಿ ಬಿಸಾಡಿದ್ದಾರೆ. ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಹಂ.ಪ ನಾಗರಾಜಯ್ಯ ಅವರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದಾರೆ. ಧರ್ಮರಾಯನಂತೆ ಬಂದು, ದುರ್ಯೋಧನ ರೀತಿಯಲ್ಲಿ ಆಗಿದೆ. ಸಾಹಿತ್ಯ ಪರಿಷತ್ತು ಏನು ಮಾಡುತ್ತಿದೆ. ಕನ್ನಡ ಸಂಘಟನೆಗಳು ಏವು ಮಾಡುತ್ತಿವೆ. ಇದು ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಆಗಿರುವ ಅವಮಾನ. ಪ್ರಜಾಪ್ರಭುತ್ವದಲ್ಲಿ ಇವರ ವಿರುದ್ಧ ಮಾತಾಡಿದವರನ್ನು ಪೊಲೀಸ್ ಸ್ಟೇಷನ್ನಲ್ಲಿ ಕೂರಿಸುತ್ತಾರೆ. ಹಂ.ಪ ನಾಗರಾಜಯ್ಯ ಅವರನ್ನು ಭೇಟಿ ಮಾಡುತ್ತೇನೆ. ನಾನು ಚಿಕ್ಕವನಿದ್ದಾಗಿನಿಂದ ಅವರನ್ನು ನೋಡಿದ್ದೇನೆ ಎಂದು ವಿವರಿಸಿದರು.