ಜ.30, 31- ಬ್ಯಾಂಕ್ ನೌಕರರ ಮುಷ್ಕರ
ಹೊಸದಿಲ್ಲಿ ಜ.13 : ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಂಘಟನೆಗಳ ಒಕ್ಕೂಟ ವೇದಿಕೆಯು 30, 31ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ ಎಂದು ವರದಿಯಾಗಿದೆ.
ಒಂಬತ್ತು ಬ್ಯಾಂಕ್ ಸಂಘಟನೆಗಳ ಒಕ್ಕೂಟವಾದ ಬ್ಯಾಂಕ್ ಸಂಘಟನೆಗಳ ಒಕ್ಕೂಟ ವೇದಿಕೆಯು ನೇತೃತ್ವದಲ್ಲಿ, ಐದು ದಿನಗಳ ಕೆಲಸದ ಅವಧಿ, ಸುಧಾರಿತ ಪಿಂಚಣಿ ವ್ಯವಸ್ಥೆ, ವೇತನ ಪರಿಷ್ಕರಣೆಗೆ ಚಾಲನೆ ಹಾಗೂ ಎಲ್ಲ ಹಂತದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಶುರು ಮಾಡುವಂತೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಹಿಂಪಡೆಯುವಂತೆಯೂ ಆಗ್ರಹಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ವಿಚಾರವಾಗಿ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಸಂಘಟನೆಗಳ ಒಕ್ಕೂಟ ವೇದಿಕೆಯ ಭಾಗವಾದ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು, ಭಾರತೀಯ ಬ್ಯಾಂಕ್‍ಗಳ ಒಕ್ಕೂಟಕ್ಕೆ ಹಲವು ಬಾರಿ ಪತ್ರ ಬರೆದರೂ ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.