ಅಮಿತ್ ಶಾ ಅವರ `ಜನ ಸಂಕಲ್ಪ ಸಮಾವೇಶ’ಕ್ಕೆ ಜನ ಸೇರಿಸಲು ಹಣ ಹಂಚಿಕೆ : ಕಾಂಗ್ರೆಸ್ ಆರೋಪ
ಬೆಂಗಳೂರು, ಡಿ.31 : ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಮಂಡ್ಯ ಜಿಲ್ಲೆಯಲ್ಲಿ ನಡೆದ `ಜನ ಸಂಕಲ್ಪ ಸಮಾವೇಶ’ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಬಿಜೆಪಿ ಮುಖಂಡರು ಹಣ ಹಂಚಿದ್ದಾರೆಂದು ಕಾಂಗ್ರೆಸ್ ಆರೋಪಿಸಿ ಈ ಕುರಿತ ವಿಡಿಯೋವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದೆ.
ಟ್ವಿಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್, `ಹಿಂದಿನ ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಈಗ ಅಮಿತ್ ಶಾ ಎದುರು ಮಾನ ಉಳಿಸಿಕೊಳ್ಳಲು ಕುರ್ಚಿಗಳಿಗಷ್ಟೇ ಅಲ್ಲ ಕುರ್ಚಿ ಮೇಲೆ ಕೂರುವವರಿಗೂ ಹಣ ಕೊಟ್ಟು ಕರೆಸಿದೆ. ಈ ಹಣ ಯಾವುದು? 40% ಕಮಿಷನ್ ಲೂಟಿಯದ್ದೇ?, ಹುದ್ದೆಗಳ ಮಾರಾಟದ ಸಂಪಾದನೆಯೇ?, ಮಂತ್ರಿಗಿರಿ ಮಾರಾಟದಿಂದ ಬಂದ ಹಣವೇ?” ಎಂದು ಪ್ರಶ್ನೆ ಮಾಡಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್ ಅವರು, `ದುಮ್ಮೇನಹಳ್ಳಿ ರಮೇಶ್ ಬಿಜೆಪಿ ಅರಸೀಕೆರೆ ತಾಲೂಕು ಅಧ್ಯಕ್ಷ, ಕಟ್ಟಿಕೆರೆ ಪ್ರಸನ್ನ ಕುಮಾರ್ ಅರಸೀಕೆರೆ ಟೌನ್ ಪ್ಲಾನಿಂಗ್ ಅಧ್ಯಕ್ಷ, ಜಿ.ವಿ.ಟಿ ಬಸವರಾಜು ಕೆ.ಆರ್.ಐ.ಡಿ.ಎಲ್, ಕಾಟಿಕೆರೆ ಪ್ರಸನ್ನ ಕುಮಾರ, ಮಟ್ಕಾ ವಿಜಿ ಅಲಿಯಾಸ್ ಅನ್ನಾಯಕನಹಳ್ಳಿ, ವಿಜಯಕುಮಾರ್ ಅಮಿತ್ ಶಾ ಕಾರ್ಯಕ್ರಮದಲ್ಲಿ ಹಣ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.