ದೇಶದಲ್ಲಿ ಪ್ರಶ್ನೆ, ವಿಮರ್ಶೆ ಮಾಡಿದರೆ ಎನ್ಕೌಂಟರ್, ಬಂಧನದಂತಹ ಸಮಸ್ಯೆ : ಎಚ್.ಎನ್. ನಾಗಮೋಹನದಾಸ್

ತುಮಕೂರು ಡಿ.29 : ದೇಶದಲ್ಲಿ ಪ್ರಶ್ನೆ, ವಿಮರ್ಶೆ ಮಾಡಿದರೆ ಎನ್ಕೌಂಟರ್, ಬಂಧನದಂತಹ ಸಮಸ್ಯೆ ಇದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತುಮಕೂರು ನಗರ ಹೊರವಲಯದ ಅಗಳಕೋಟೆಯಲ್ಲಿ ನಿನ್ನೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಶ್ನೆ, ವಿಮರ್ಶೆ, ಟೀಕೆ ಮಾಡುವವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಇಲ್ಲವೇ ಎನ್‍ಕೌಂಟರ್‍ನಲ್ಲಿ ಸಾಯಿಸುವ ಸನ್ನಿವೇಶ ಸೃಷ್ಟಿಯಾಗಿದೆ’ ಇದರ ಜೊತೆಗೆ ‘ಪೆಗಾಸಸ್ ಎಂಬ ಕುತಂತ್ರಾಂಶ ಬಳಸಿ, ಗೋಪ್ಯವಾಗಿ ರಕ್ಷಿಸಿಕೊಂಡು ಬಂದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ’ ಎಂದರು.

1 thought on “ದೇಶದಲ್ಲಿ ಪ್ರಶ್ನೆ, ವಿಮರ್ಶೆ ಮಾಡಿದರೆ ಎನ್ಕೌಂಟರ್, ಬಂಧನದಂತಹ ಸಮಸ್ಯೆ : ಎಚ್.ಎನ್. ನಾಗಮೋಹನದಾಸ್

  1. ನಾಗ ಮೋಹನ ದಾಸ್ರವರೆ ನೀವು ನ್ಯಾಯಮೂರ್ತಿಯಾಗಿ ಕೆಲಸ ಮಾಡಿದವರು,ಗಾಳಿಯಲ್ಲಿ ಗುಂಡು ಹೋಡೆಯಬೇಡಿ ನಿರ್ದಿಷ್ಟ ಪ್ರಕರಣಗಳ ಉದಾಹರಣೆ ಕೊಟ್ಟು ಮಾತನಾಡಿ

Leave a Reply

Your email address will not be published. Required fields are marked *

error: Content is protected !!