ಬೀದಿ ಬದಿ ವ್ಯಾಪಾರಿಗಳ ಸಾಲದ ಸ್ಟ್ಯಾಂಪ್ ಡ್ಯೂಟಿ ರದ್ದು ವಿಧೇಯಕಕ್ಕೆ ಅನುಮೋದನೆ
ಬೆಳಗಾವಿ ಡಿ.28 : ಬೀದಿ ಬದಿಯ ವ್ಯಾಪಾರಿಗಲು ಪಡೆಯುವ ಸಣ್ಣ ಪ್ರಮಾಣದ ಸಾಲಕ್ಕೆ ವಿಧಿಸಲಾಗುತ್ತಿದ್ದ ಸ್ಟ್ಯಾಂಪ್ ಡ್ಯೂಟಿಯನ್ನು ರದ್ದುಗೊಳಿಸುವ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗಿಕಾರ ನೀಡಲಾಗಿದೆ.
ಧ್ವನಿಮತದ ಮೂಲಕ ಈ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿದ್ದು, ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಸ್ಟ್ಯಾಂಪು ನಾಲ್ಕನೇ ತಿದ್ದುಪಡಿ ವಿಧೇಯಕವನ್ನು ಯಥಾವತ್ತು ಪರಿಷತ್ತಿನಲ್ಲಿ ಪರ್ಯಾಲೋಚನೆಗೆ ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿದರು. ಹಾಗೂ ಬೀದಿ ಬದಿಯ ವ್ಯಾಪಾರಿಗಳು ಪಡೆದುಕೊಳ್ಳುವ 10 ಲಕ್ಷ ರೂಪಾಯಿ ಸಾಲ ಮತ್ತು ಅವರು ಅಡಮಾನ ಮಾಡುವ ಸ್ವತ್ತುಗಳಿಗೆ ವಿಧಿಸಲಾಗುತ್ತಿದ್ದ ಸ್ಟ್ಯಾಂಪ್ ಡ್ಯೂಟಿಯನ್ನು ರದ್ದು ಮಾಡಲಾಗಿದೆ. ಇದರಿಂದ ಎರಡು ಲಕ್ಷ ಬೀದಿ ಬದಿಯ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬಳಿಕ ನಜೀರ್ ಅಹಮ್ಮದ್, ಪ್ರಕಾಶ್ ರಾಥೋಡ್ ಸೇರಿದಂತೆ ಅನೇಕರು ಈ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.