ಕೊರೊನಾ ಮೂಗಿನ ಲಸಿಕೆಗೆ ಬೆಲೆ ನಿಗದಿ – ಖಾಸಗಿ ಆಸ್ಪತ್ರೆಯಲ್ಲಿ ರೂ.800- ಸರಕಾರಿ ಆಸ್ಪತ್ರೆಯಲ್ಲಿ ರೂ. 325

ನವದೆಹಲಿ, ಡಿ 27 : ಕೋವಿಡ್ ಪ್ರಕರಣಗಳು ನೆರೆಯ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ  ಮುಂಜಾಗ್ರತಾ ಕ್ರಮವಾಗಿ ಮತ್ತೆ ಕೋವಿಡ್ ಲಸಿಕಾ ಅಭಿಯಾನ ಆರಂಭಗೊಂಡಿದೆ. 

ಈ ಬಾರಿ ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ್ ಬಯೋಟೆಕ್‌ ನ ಮೂಗಿನ ಕೊರೊನಾ ಲಸಿಕೆಗೆ ಬೆಲೆ ನಿಗದಿ ಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 800 ರೂ.ಗೆ ಈ ಲಸಿಕೆ ಲಭ್ಯವಾಗಲಿದ್ದು, ಕೋವಿನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಈ ಲಸಿಕೆಯ ಬೆಲೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ 325 ರೂ. ನಿಗದಿ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ.

ಇನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಮೂಗಿನ ಲಸಿಕೆಯನ್ನು ಅನುಮೋದಿಸಿದ್ದು, ಈ ಲಸಿಕೆಯ ಹೆಸರು iNCOVACC. ಈ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲಾಗುವುದು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬಹುದು. ಈ ಲಸಿಕೆಯನ್ನು ಮೂಗಿನ ಮೂಲಕ ನೀಡಬೇಕಾಗಿದ್ದು, ಮೂಗಿನ ಲಸಿಕೆಯನ್ನು ನೀಡುವ ಕೆಲಸವನ್ನು ಜನವರಿ ನಾಲ್ಕನೇ ವಾರದಲ್ಲಿ ಪ್ರಾರಂಭಿಸಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!