ಸುರತ್ಕಲ್:ಸರಣಿ ಕಳ್ಳತನ ಪ್ರಕರಣ ಆರೋಪಿ ಬಂಧನ
ಮಂಗಳೂರು: ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಮೂಲದ ಪ್ರಸ್ತುತ ಉಡುಪಿಯ ಇಂದ್ರಾಳಿ ದುರ್ಗಾನಗರದ ನಿವಾಸಿಯಾಗಿರುವ ರಾಜೇಶ್ ನಾಯ್ಕ(42) ಬಂಧಿತ ಆರೋಪಿ. ಬಂಧಿತನಿಂದ 47 ಗ್ರಾಂ ಚಿನ್ನ ,16 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 13.53 ಲಕ್ಷ ರೂ. ಆಗಿರುತ್ತದೆ.
ಈತ ಕುಳಾಯಿ ಗ್ರಾಮದ ರವಿ ಶೆಟ್ಟಿ, ಈಡ್ಯಾ ಗ್ರಾಮದ ಗುಡ್ಡೆ ಕೊಪ್ಪಳ ರಾಮಂಜನೇಯ ಭಜನಾ ಮಂದಿರ, ಕಾರು ಮನೆ ದೈವಸ್ಥಾನ ಮತ್ತು ಸತೀಶ್ ಸುವರ್ಣ ಅವರ ಕುಟುಂಬಕ್ಕೆ ಸೇರಿದ ದೈವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಎಂದು ತಿಳಿದು ಬಂದಿದೆ. ಇದೀಗ ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.