ಯುವ ಕಾಂಗ್ರೆಸ್ ಚುನಾವಣೆ : ಯುವ ಜನರ ಚಿತ್ತ ದೀಪಕ್ ಕೋಟ್ಯಾನ್ ನತ್ತ


ಉಡುಪಿ (ಉಡುಪಿ ಟೈಮ್ಸ್ ವರದಿ) : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಚುನಾವಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಅಧ್ಯಕ್ಷ ಪಟ್ಟಕ್ಕೆ ಜಿಲ್ಲೆಯ ಬಹುತೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ಪರ್ಧೆಯಲ್ಲಿದ್ದು, ಕಾರ್ಕಳದ ಹೋರಾಟಗಾರ ಯುವ ನಾಯಕ ದೀಪಕ್ ಕೋಟ್ಯಾನ್ ಇನ್ನಾ ಒಲವು ತೋರಿಸುತ್ತಿದ್ದು ಭಾರಿ ಕುತೂಹಲ ಕೆರಳಿಸಿದೆ.


ನಾಳೆ ( ಜ12.) ಬೆಳಿಗ್ಗೆ 9 ರಿಂದ 4 ರವರೆಗೆ ನಡೆಯುವ ಚುನಾವಣೆಗೆ ಆನ್ ಲೈನ್ ಮೂಲಕ ಮತದಾನ ಪ್ರಕ್ರಿಯೆ ನಡೆಯಲಿದ್ದು ,ಮತದಾನದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಪಡೆದ ಕಾರ್ಯಕರ್ತರು ಮತದಾನ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರದಲ್ಲಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿದ್ದಾರೆ.   ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ವಿಶ್ವಾಸ್ ಅಮಿನ್ ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಪಟ್ಟಕ್ಕೆ ಸ್ಪರ್ಧಿಸುತ್ತಿರುವ ಕಳೆದ ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೀಪಕ್ ಕೋಟ್ಯಾನ್ ಯುವ ಕಾಂಗ್ರೆಸ್ ಕಾರ್ಯಕರ್ತರ ಮನ ಒಲಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.


  ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತವರು ಕ್ಷೇತ್ರವಾದ ಕಾರ್ಕಳ ವಿಧಾನಸಭಾ ಕ್ಷೇತ್ರದದಲ್ಲಿ ಕಾಂಗ್ರೆಸ್ ನಾಯಕರಿಲ್ಲದೇ ಸೊರಗಿದೆ. ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನದ ಬಳಿಕ ಕಾರ್ಕಳದಲ್ಲಿ ಕಾಂಗ್ರೆಸ್ ಸುದ್ದಿಯಲ್ಲಿಯೇ ಇಲ್ಲದಾಗಿದೆ. ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಬಿಜೆಪಿಗೆ ಶರಣಾಗಿತ್ತು. ಇತ್ತಿಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಹಳಷ್ಟು ಗ್ರಾಮಗಳಲ್ಲಿ ಬಿಜೆಪಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯುವಕರನ್ನು ಸಂಘಟಿಸ ಬಲ್ಲಂತಹ ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಯವರನ್ನು ಕಾರ್ಕಳ ಮತ್ತು ಜಿಲ್ಲಾ ಕಾಂಗ್ರೆಸ್ ಅವಕಾಶವನ್ನು ನೀಡದೆ ಇದ್ದುದರ ವಿರುದ್ಧ ತಿರುಗಿಬಿದ್ದು ರಾಜಕೀಯದಿಂದಲೇ ದೂರ ಸರಿದಿದ್ದಾರೆ.

ಇಂತಹ ಹಿಂದುತ್ವ ಮತ್ತು ಬಿಜೆಪಿಯ ಭದ್ರ ಕೋಟೆಯಲ್ಲಿ ಇನ್ನಾ ಗ್ರಾಮ ಪಂಚಾಯತ್ ನಲ್ಲಿ ಸ್ಪರ್ಧಿಸಿ ಭರ್ಜರಿ ಬಹುಮತ ಗಳಿಂದ ಆಯ್ಕೆಯಾದ ದೀಪಕ್ ಕೋಟ್ಯಾನ್ ರತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಪ್ರೇರೇಪಿತರಾಗಿದ್ದಾರೆ. ಬಿಜೆಪಿಯ ಭದ್ರಕೋಟೆ ಹಲವು ಆಮಿಷಗಳ ನಡುವೆಯೂ ದೀಪಕ್ ಕೋಟ್ಯಾನ್ ಇನ್ನಾ ಜಯಗಳಿಸಿದ್ದು, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಆಶಾಭಾವನೆಯಾಗಿದೆ.

 ಹಲವು ಕನಸುಗಳನ್ನು ಇಟ್ಟುಕೊಂಡು ನೇರ ಮತ್ತು ದಿಟ್ಟ ಹೋರಾಟ ನೀಡಬಲ್ಲ ಚತುರ ಸಂಘಟಕ ಮತ್ತು ಯಾವುದೇ ಸಂಕಷ್ಟದ ಸಮಯದಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಲ್ಲಲು ಸಜ್ಜಾಗಿರುವ ದೀಪಕ್ ಕೋಟ್ಯಾನ್, ಈ ಬಾರಿ ಬದಲಾವಣೆ ಮಾಡಿ, ಜಿಲ್ಲೆಯಲ್ಲಿ ತಮಗೆ ಅವಕಾಶ ನೀಡಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸುತ್ತಿದ್ದಾರೆ.

ದೀಪಕ್ ಕೋಟ್ಯಾನ್ ಮೇಲೆ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರ ಪೂರಕ ವಾತಾವರಣವಿದ್ದು, ಬಿಜೆಪಿಯ ಭದ್ರಕೋಟೆ ಕಾರ್ಕಳದಲ್ಲಿಯೇ ಯುವ ಕಾಂಗ್ರೆಸ್‌ಗೆ ಮುಂಚೂಣಿಯಾಗಿ ನಿಂತಿರುವ  ಮತ್ತು ಶಾಸಕ ಸುನೀಲ್ ಕುಮಾರ್ ಹಾಗೂ ಬಿಜೆಪಿ ಪ್ರಬಲ ನಾಯಕರುಗಳಿಗೆ ಸೆಟೆದು ನಿಲ್ಲಬಲ್ಲ ಯುವಕನ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕರ್ಷಿತರಾಗಿದ್ದಾರೆ.

ಈ ಬಾರಿಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ದೀಪಕ್ ಕೋಟ್ಯಾನ್ ಅಧ್ಯಕ್ಷರಾದರೆ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಮತ್ತೆ ಬಲವರ್ಧನೆ ಯಾಗಬಹುದೆಂಬ ಆಶಾಭಾವನೆಯಲ್ಲಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು, ಈ ಬಾರಿ ದೀಪಕ್ ಕೋಟ್ಯಾನ್ ಆಯ್ಕೆಯಾದರೆ ಉತ್ತಮ ಎಂದು ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.


  ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಲವು ಸ್ಪರ್ಧಿಗಳಿದ್ದರೂ, ನೇರ ಸ್ಪರ್ಧೆ ಇರುವುದು ಮಾತ್ರ ವಿಶ್ವಾಸ್ ಅಮೀನ್ ಹಾಗೂ ದೀಪಕ್ ಕೋಟ್ಯಾನ್ ನಡುವೆ. ಬಿಲ್ಲವ ಸಮಾಜದವರು ಆಗಿರುವ ದೀಪಕ್ ಕಳೆದ ಕೊರೊನಾ ಲಾಕ್ ಡೌನ್ ಸಮಯದಲ್ಲಿ ತನ್ನ ವೈಯಕ್ತಿಕ ಮತ್ತು ಹಲವು ದಾನಿಗಳ ಸಹಕಾರದಿಂದ ಹಲವು ಕುಟುಂಬಗಳಿಗೆ ಆಸರೆಯಾಗಿದ್ದರು. ಯಾವುದೇ ಸಂದರ್ಭದಲ್ಲಿ ಕಾರ್ಯಕರ್ತರಿಗೆ  ಸಂಕಷ್ಟ ಬಂದಾಗ ತುರ್ತಾಗಿ ಸ್ಪಂದಿಸುವ ದೀಪಕ್ ಕೋಟ್ಯಾನ್ ಈ ಬಾರಿಯ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಬೇಕೆಂಬ ಆಸೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರದ್ದು.

Leave a Reply

Your email address will not be published. Required fields are marked *

error: Content is protected !!