ವಿಶ್ವದ ಅತೀ ದೀರ್ಘ ವಾಯುಮಾರ್ಗ ಪಯಣ; ಭಾರತೀಯ ಮಹಿಳಾ ಪೈಲಟ್‌ಗಳ ಹೊಸ ಇತಿಹಾಸ

ಬೆಂಗಳೂರು: ವಿಶ್ವದ ಅತೀ ದೀರ್ಘ ವಾಯುಮಾರ್ಗ ಕ್ರಮಿಸುವ ಮೂಲಕ  ಭಾರತೀಯ ಮಹಿಳಾ ಪೈಲಟ್‌ಗಳ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಏರ್‌ ಇಂಡಿಯಾದ ನಾಲ್ವರು ಮಹಿಳಾ ಪೈಲಟ್‌ಗಳು ಸ್ಯಾನ್‌ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ವಹಿಸಿದ್ದು, ಈ ತಂಡದಲ್ಲಿ ಕ್ಯಾಪ್ಟನ್ ಜೋಯಾ ಅಗರ್‌ವಾಲ್‌, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಪಾಲ್ಗೊಂಡಿದ್ದರು. 

ಈ ಮಹಿಳಾ ಪೈಲಟ್‌ಗಳ ತಂಡದ  ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ, 16,000 ಕಿ.ಮೀ ದೂರವನ್ನು ಕ್ರಮಿಸಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಈ ವೇಳೆ ತಮ್ಮ‌ಸಾಧನೆಯ ಕುರಿತು  ಸಂತಸ ವ್ಯಕ್ತಪಡಿಸಿದ ಪೈಲಟ್‌ ಶಿವಾನಿ ಮನ್ಹಾಸ್ ಅವರು,  ಸ್ಯಾನ್‌ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬರಲು ಸುಮಾರು 17 ಗಂಟೆಗಳು ಬೇಕಾಯಿತು” ಇದು ಹಿಂದೆಂದೂ ನಡೆಯದೇ ಇದ್ದ ವಿದ್ಯಮಾನವಾಗಿದ್ದು, ಈ ಸಾಹಸ ರೋಮಾಂಚಕಾರಿ ಅನುಭವ ನೀಡಿತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!