ಸಂಪುಟ ವಿಸ್ತರಣೆಗೆ ಹೈಕಮಾಂಡ್‌ ಸಮ್ಮತಿ- ಸಿಎಂ ಬಿಎಸ್‌ವೈ

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ಸರ್ಕಸ್ ಗೆ ತೆರೆ ಬೀಳುವ ಸಮಯ ಬಂದೇ ಬಿಟ್ಟಿದೆ. ಸಚಿವ ಸಂಪುಟ ವಿಸ್ತರಣೆಗೆ   ಹೈಕಮಾಂಡ್‌‌  ಅಸ್ತು ಎಂದಿದ್ದು,  ಸಂಪುಟಕ್ಕೆ ಏಳು ಮಂದಿ ಶಾಸಕರು ಸಂಪುಟ ಸೇರ್ಪಡೆಯಾಗಲಿದ್ದಾರೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಜ.14ರಂದು ಸಂಕ್ರಾತಿ ಹಬ್ಬದ ಹಿನ್ನೆಲೆ ಜ.13ರಂದು ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಯಾರೆಲ್ಲಾ ಸಚಿವ ಸಂಪುಟದಲ್ಲಿ ಸೇರ್ಪಡೆ ಯಾಗಲಿದ್ದಾರೆ ಎಂಬುದು ಇಂದು ಗೊತ್ತಾಗಲಿದೆ

Leave a Reply

Your email address will not be published. Required fields are marked *

error: Content is protected !!