ಜಿಲ್ಲೆಯಲ್ಲಿ ಪಕ್ಷ ಸೋತಾಗ ನಾನು ಕಾರಣ ಎನ್ನುವವರು ನೀವೆಷ್ಟು ಪಕ್ಷಕ್ಕಾಗಿ ದುಡಿದಿದ್ದೀರಾ? ಮಧ್ವರಾಜ್ ಕಿಡಿ
ಉಡುಪಿ(ಉಡುಪಿ ಟೈಮ್ಸ್ ವರದಿ): ನಾವು ಸೋತಿರುವುದು ಜನರ ಆದೇಶದಿಂದ ಅದಕ್ಕಾಗಿ ಬೇಸರ ಪಟ್ಟುಕೊಳ್ಳುಬಾರದು ಎಂದ ಅವರು, ಜಿಲ್ಲೆಯಲ್ಲಿ ಪಕ್ಷ ಸೋತಾಗ ಪ್ರಮೋದ್ ಮಧ್ವರಾಜ್ ಕಾರಣ ಎನ್ನುವವರು ನೀವೆಷ್ಟು ಪಕ್ಷಕ್ಕಾಗಿ ದುಡಿದಿದ್ದೀರಾ ಎಂಬುದನ್ನು ಮೊದಲು ಆಲೋಚಿಸಿ ಎಂದು ಖಾರವಾಗಿ ನುಡಿದರು.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಗ್ರಾಮ ಪಂಚಾಯತ್ ಚುನಾವಣಾ ಬಗ್ಗೆ ಅವಲೋಕನ, ಸ್ಪರ್ಧಿಸಿದ ಅಭ್ಯರ್ಥಿಗಳಿಗೆ, ವಿಜೇತರಿಗೆ ಅಭಿನಂದನೆ ಹಾಗೂ ಚುನಾನಣೆಯಲ್ಲಿ ತೊಡಗಿಸಿಕೊಂಡ ನಾಯಕರಿಗೆ, ಕಾರ್ಯಕರ್ತರಿಗೆ ಕೃತಜ್ಞತೆಯನ್ನ ಸಲ್ಲಿಸುವ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಗೊಳಿಸಲು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಯುವಕರನ್ನು ಸಂಘ ಟಿಸುವ ಕೆಲಸ ಮಾಡಬೇಕು ಹಾಗೂ ಇಡೀ ಉಡುಪಿ ಜಿಲ್ಲೆಯಲ್ಲಿ ಯುವಕರನ್ನು ಒಗ್ಗೂಡಿಸುವ ಕೆಲಸ ನಿರಂತರ ವಾಗಿ ನಡೆಯಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು .
ಪ್ರತಿಯೊಬ್ಬ ಕಾರ್ಯಕರ್ತರು ವಾರದಲ್ಲಿ ಕನಿಷ್ಟ ಒಂದು ಗಂಟೆಯನ್ನು ಪಕ್ಷ ಸಂಘಟನೆಗಾಗಿ ವಿನಿಯೋಗಿಸದಿದ್ದರೆ ಪಕ್ಷ ಸಂಘಟನೆಯಾಗುವುದಾದರೂ ಹೇಗೆ. ಈ ನಿಟ್ಟಿನಲ್ಲಿ ಕಾರ್ಯಕರ್ತರಿಂದಲೂ ತಮ್ಮ ತಮ್ಮ ಬೂತ್ ನಲ್ಲಿ ಕನಿಷ್ಟ 10 ರಿಂದ 50 ಮಂದಿಯನ್ನು ಒಗ್ಗೂಡಿಸುವ ಕೆಲಸ ಆಗಬೇಕು.
ಚುನಾವಣೆ ಯ ಕೊನೇ ಗಳಿಗೆಯಲ್ಲಿ ನಾಮ ಪತ್ರ ಸಲ್ಲಿಸಿ ಜನರ ಬಳಿ ಹೋದರೆ ಜನ ನಮ್ಮನ್ನು ಸ್ವೀಕಾರ ಮಾಡುವುದಿಲ್ಲ. ಜನರು ನಮ್ಮನ್ನು ಗೆಲ್ಲಿಸಬೇಕಾದರೆ ಜನರಿಗೆ ಸತತವಾದ ಸೇವೆಯನ್ನು ಮಾಡಬೇಕು ಎಂದರು.